ರಣವೀರ್ ಸಿಂಗ್​​​ರನ್ನು ಒಪ್ಪದ ದೀಪಿಕಾ ಪಡುಕೋಣೆ ತಾಯಿ..! ಅಮ್ಮನನ್ನು ಒಪ್ಪಿಸಲು ದೀಪಿಕಾ ಹರಸಾಹಸ

dmom
Published on

ರಾಮ್ ಲೀಲಾ ಚಿತ್ರ ಬಿಡುಗಡೆ ನಂತರ ದೀಪಿಕಾ ಪಡುಕೋಣೆಗೆ ರಣವೀರ್ ಸಿಂಗ್ ಪ್ರಪೋಸ್‌ ಮಾಡಿದ್ದರಂತೆ. ಡೇಟಿಂಗ್ ಮಾಡಿದ ಆರು ತಿಂಗಳಲ್ಲೇ ದೀಪಿಕಾ ತನಗೆ ಸರಿಯಾದ ಜೋಡಿ ಎಂದು ತಿಳಿದೆ ಎಂದು ರಣವೀರ್ ಹೇಳಿದ್ದಾರೆ.


ಕರಣ್ ಜೋಹರ್ ಅವರ ಶೋ 'ಕಾಫಿ ವಿತ್ ಕರಣ್' ಸೀಸನ್ 8 ರ ಮೊದಲ ಸಂಚಿಕೆಯಲ್ಲಿ ರಣವೀರ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ಸಮಯದಲ್ಲಿ, ರಣವೀರ್ ಅವರು ಮಾಲ್ಡೀವ್ಸ್‌ನಲ್ಲಿ ದೀಪಿಕಾಳನ್ನು ಮದುವೆಗೆ ಪ್ರಪೋಸ್‌ ಮಾಡಿದ್ದಾಗಿ ಹೇಳಿದ್ದಾರೆ.


ಉಂಗುರ ತೊಡಿಸುವ ಮೂಲಕ ರಣ್​​ವೀರ್​ ದೀಪಿಕಾಗೆ ಪ್ರಪೋಸ್​ ಮಾಡಿದ್ದರಂತೆ. ಈ ನಿಟ್ಟಿನಲ್ಲಿ ರಣ್​​ವೀರ್​​ ತನ್ನ ತಾಯಿ ಮತ್ತು ತಂಗಿಯೊಂದಿಗೆ ಗುಟ್ಟಾಗಿ ತೆರಳಿ ಉಂಗುರವೊಂದನ್ನ ಖರೀದಿಸಿದ್ದರಂತೆ.


ರಣವೀರ್ ಸಿಂಗ್‌ ಅವರು ದೀಪಿಕಾಗೆ ಉಂಗುರವನ್ನು ನೀಡುವ ಮೂಲಕ ಮದುವೆಯ ಪ್ರಪೋಸ್‌ ನೀಡಿದರು. ರಣವೀರ್‌ ಅವರ ಈ ಪ್ರಪೋಸಲ್‌ನ್ನು ದೀಪಿಕಾ ತಕ್ಷಣ ಒಪ್ಪಿಕೊಂಡಿದ್ದರು.


ದೀಪಿಕಾ ತಾಯಿಯ ಮನವೊಲಿಸಲು ಹರಸಾಹಸ :
ರಣವೀರ್ ಸಿಂಗ್‌ ಪ್ರಕಾರ, ದೀಪಿಕಾ ತಮ್ಮಿಬ್ಬರ ಲವ್​ ಬಗ್ಗೆ ತನ್ನ ಕುಟುಂಬಕ್ಕೆ ಸಂಪೂರ್ಣ ಕಥೆಯನ್ನು ಹೇಳಿದ್ದಾರೆ. ಈ ಸುದ್ದಿ ಕೇಳಿ ಎಲ್ಲರೂ ತುಂಬಾ ಸಂತೋಷಪಡುತ್ತಾರೆ ಎಂದು ಭಾವಿಸಿದ್ದೆ, ಆದರೆ ಅದು ಹಾಗಾಗಲಿಲ್ಲ ಎಂದು ಹೇಳಿದ್ದಾರೆ. ರಣವೀರ್ ಪ್ರಕಾರ, ಆರಂಭದಲ್ಲಿ ದೀಪಿಕಾ ಅವರ ತಾಯಿ ಈ ಸಂಬಂಧದ ಬಗ್ಗೆ ಸಂತೋಷವಾಗಿರಲಿಲ್ಲ. ದೀಪಿಕಾ ಅವರ ಬಳಿ, ಈ ಹುಡುಗ ಯಾರು? ಎಂದು ಕೇಳಿದ್ದರು. ರಣವೀರ್ ಪ್ರಕಾರ, ದೀಪಿಕಾ ಅವರ ತಾಯಿಯನ್ನು ಮದುವೆಗೆ ಒಪ್ಪಿಸಲು ಒಂದು ವರ್ಷ ತೆಗೆದುಕೊಂಡಿತು. ಆದರೆ ನಂತರ ದೀಪಿಕಾ ತಾಯಿ ಈ ಸಂಬಂಧವನ್ನು ಒಪ್ಪಿಕೊಂಡರು. ಇಂದು ನಾನು ದೀಪಿಕಾ ಅವರ ತಾಯಿಯ ನೆಚ್ಚಿನ ವ್ಯಕ್ತಿ ಎಂದು ನಟ ರಣ್​​ವೀರ್​​ ಕಾಫಿಇಇ ವಿತ್​​​ ಕರಣ್​ ಶೋನಲ್ಲಿ ಹೇಳಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net