ದೀಪಿಕಾ ಎಕ್ಸ್​​ ಬಾಯ್​ಫ್ರೆಂಡ್​​​​ ಪೋಸ್ಟ್​​​ ವೈರಲ್​; ಪ್ರೇಮದ ಕುರಿತ ಹಾಸ್ಯ ವಿಡಿಯೋಗಳಿಗೆ ವ್ಯಾಪಕ ಟೀಕೆ..!

ddd
Published on

Deepika Padukone: ಇತ್ತೀಚಿನ ಸಂದರ್ಶನವೊಂದರಲ್ಲಿ, ದೀಪಿಕಾ ತನ್ನ ಹಿಂದಿನ ರೊಮ್ಯಾನ್ಸ್ ಮತ್ತು ಡೇಟಿಂಗ್ ಬಗ್ಗೆ ಪ್ರಸ್ತಾಪಿಸಿದ್ದರು.. ಇದೀಗ ದೀಪಿಕಾ ಪಡುಕೋಣೆ ಪ್ರೇಮದ ಕುರಿತ ಹಾಸ್ಯ ವಿಡಿಯೋಗಳು ವೈರಲ್‌ ಆಗುತ್ತಿದ್ದು ವಿವಾದಕ್ಕೆ ಕಾರಣವಾಗಿವೆ.


ಉತ್ತರ ಪ್ರದೇಶದ ಸ್ಟ್ಯಾಂಡ್ ಅಪ್ ಕಾಮಿಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಲನಚಿತ್ರ ನಟ ರಣಬೀರ್ ಕಪೂರ್, ಕ್ರಿಕೆಟಿಗ ಯುವರಾಜ್ ಸಿಂಗ್, ನಟ ನಿಹಾರ್ ಪಾಂಡ್ಯ ಮತ್ತು ನಟ ಮತ್ತು ಮಾಡೆಲ್ ಸಿದ್ಧಾರ್ಥ್ ಮಲ್ಯ ಸೇರಿದಂತೆ ದೀಪಿಕಾ ಅವರ ಕೆಲವು ಎಕ್ಸ್​​ ಬಾಯ್​ಫ್ರೆಂಡ್ಸ್​​​​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.


ದೀಪಿಕಾ ಪಡುಕೋಣೆ ಈ ವಿಡಿಯೋ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಲವರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಇದು ನಾಚಿಕೆಗೇಡಿನ ಕೃತ್ಯ ಎಂದು ಮತ್ತೊಬ್ಬರು ಬರೆದಿದ್ದು, ಮೀಮ್ಸ್ ಚೆನ್ನಾಗಿದೆ…ಆದರೆ ಇದು ವ್ಯಕ್ತಿತ್ವದ ಕೊಲೆ ಎಂದು ಮತ್ತೊಬ್ಬ ವೀಕ್ಷಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.


ದೀಪಿಕಾ ಕೆಲ ದಿನಗಳ ಹಿಂದೆ ಕರಣ್​​ ಜೋಹರ್​​​ ಚಾಟ್​ ಶೋ ಕಾಫಿ ವಿತ್​​​ ಕರಣ್​​ನಲ್ಲಿ ನೀಡಿದ ಹೇಳಿಕೆಯೇ ಇದಕ್ಕೆ ಕಾರಣ ಅಂತಲೂ ಹೇಳಲಾಗುತ್ತಿದ್ದು, ದೀಪಿಕಾ ಹೇಳಿಕೆ ಅವರ ವ್ಯಕ್ತಿತ್ವದ ಮೇಲೆ ಕಪ್ಪು ಚುಕ್ಕೆಯಾದಂತಿದೆ.


ಶಾರುಖ್ ಖಾನ್ ಅಭಿನಯದ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಸಂಭಾವನೆ ಪಡೆಯದೇ ಪಾತ್ರವನ್ನು ನಿರ್ವಹಿಸಿ.. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net