ಪ್ಯಾರಿಸ್​ನ ಫ್ಯಾಶನ್​ ವೀಕ್​ನಲ್ಲಿ ತಂದೆತಾಯಿಯೊಂದಿಗೆ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

deepika
Published on

ನವದೆಹಲಿ: ಲೂಯಿಸ್ ವುಯ್ಟನ್​ ಸಂಸ್ಥೆಯ ರಾಯಭಾರಿ ಆಗಿರುವ ದೀಪಿಕಾ ಪಡುಕೋಣೆ ಪ್ಯಾರಿಸ್​ನ ಫ್ಯಾಶನ್​ ವೀಕ್​ ಎಂಬ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ತಮ್ಮ ತಂದೆತಾಯಿಯೊಂದಿಗೆ ಕಂಡು ಬಂದಿರುವ ಚಿತ್ರ ವೈರಲ್ ಆಗಿದೆ. ತಮ್ಮ ಪೋಷಕರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿರುವ ದೀಪಿಕಾಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫ್ಯಾನ್​ ಪೇಜ್​ಗಳು ಶೇರ್ ಮಾಡಿರುವ ವಿಡಿಯೋ ಒಂದರಲ್ಲಿ ನಟಿ ತಮ್ಮ ಪೋಷಕರೊಂದಿಗೆ ಜನರ ನಡುವೆ ನಿಂತುಕೊಡಿದ್ದಾರೆ. ನಟಿ ಸುಂದರವಾದ ದಿರಿಸನ್ನು ಧರಿಸಿಕೊಂಡು ಜನರೊಂದಿಗೆ ಮಾತನಾಡುತ್ತಿದ್ದರೆ ಅವರ ಪಾಲಕರು ಕಾರಿಗಾಗಿ ಕಾಯುತ್ತಿರುವುದು ಕಂಡುಬಂದಿದೆ.

ಅನೇಕ ಅಭಿಮಾನಿಗಳು ದೀಪಿಕಾ ತಮ್ಮ ತಂದೆತಾಯಿಯನ್ನು ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದದ್ದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ದೀಪಿಕಾರ ತಾಯಿ ಉಜ್ಜಲಾ ಪಡುಕೋಣೆಯ ಲುಕ್​ಗೆ ಫಿದಾ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net