ಪಾಲಕರದ ಬಳಿಕ ಮೊದಲ ಬಾರಿಗೆ ಸ್ಕ್ರೀನ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ದೀಪ್ವೀರ್​​; ಫ್ಯಾನ್ಸ್​ ಹೇಳಿದ್ದು ಹೀಗೆ.. | Deepika Padukone & Ranveer Singh

Untitled design - 2025-04-06T170146.284
Published on

ಮುಂಬೈ: ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್(Deepika Padukone & Ranveer Singh) ತಮ್ಮ ಮಗು ದುವಾ ಪಡುಕೋಣೆ ಸಿಂಗ್ ಅವರನ್ನು ಸ್ವಾಗತಿಸಿದ ನಂತರ ಮೊದಲ ಬಾರಿಗೆ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೊಸ ಏರ್ ಕಂಡಿಷನರ್ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ದೀಪ್ವೀರ್​ ದಂಪತಿಯ ವಿಡಿಯೋವನ್ನು ಬ್ರ್ಯಾಂಡ್​​ ಕಂಪನಿ ಹಂಚಿಕೊಂಡಿದೆ.

ಜಾಹೀರಾತಿನಲ್ಲಿ, ರಣವೀರ್ ತನ್ನ ಪಾರ್ಟಿಯಲ್ಲಿ ಅತಿಥಿಗಳು ದೀಪಿಕಾಳ ಆಹಾರ ಅಥವಾ ಕಥೆಗಳ ಬದಲಿಗೆ ಅವಳ ಏರ್​ ಕಂಡಿಷನರ್​​ ಅನ್ನು ಹೇಗೆ ಆನಂದಿಸುತ್ತಿದ್ದರು ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಅತಿಥಿಗಳನ್ನು ಆರ್ಕಷಿಸಲೆಂದೆ ಎಸಿ ಕೊಂಡಿದ್ದೆ ಎಂದು ದೀಪಿಕಾ ಬೇಸರಗೊಂಡು ಕೇಳಿದಾಗ ರಣವೀರ್​ ಇಲ್ಲ ನಿನಗಾಗಿಯೇ ಖರಿದೀಸಿದ್ದು ಎಂದು ಹೇಳುವ ಮೂಲಕ ಅವಳನ್ನು ಸಮಾಧಾನಪಡಿಸುತ್ತಾನೆ. ವಿಡಿಯೋ ನೋಡಿ, ಇದು ನನ್ನ ನೆಚ್ಚಿನ ಜಾಹೀರಾತುಗಳಲ್ಲಿ ಅತ್ಯುತ್ತಮವಾದದ್ದು, ದೀಪ್ವೀರ್ ಒಟ್ಟಿಗೆ ತುಂಬಾ ಅದ್ಭುತವಾಗಿ ಕಾಣುತ್ತಿದ್ದಾರೆ, ಮೇಡಂ, ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ, ಅತ್ಯಂತ ಮುದ್ದಾದ ಜೋಡಿ, ದೊಡ್ಡ ಪರದೆಯ ಮೇಲೆ ನಿಮ್ಮಿಬ್ಬರನ್ನೂ ಒಟ್ಟಿಗೆ ಮಿಸ್ ಮಾಡಿಕೊಳ್ಳುತ್ತಿದ್ದೇವೆ! ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ದೀಪಿಕಾ ಮತ್ತು ರಣವೀರ್ ಕೊನೆಯ ಬಾರಿಗೆ ರೋಹಿತ್ ಶೆಟ್ಟಿ ಅವರ 'ಸಿಂಘಮ್ ಎಗೇನ್' ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ಚಿತ್ರದಲ್ಲಿ ದೀಪಿಕಾ ಶಕ್ತಿ ಶೆಟ್ಟಿ ಅಕಾ ಲೇಡಿ ಸಿಂಘಂ ಪಾತ್ರವನ್ನು ನಿರ್ವಹಿಸಿದರೆ, ರಣವೀರ್ ಸಿಂಬಾ ಪಾತ್ರದಲ್ಲಿ ಕಾಣಿಕೊಂಡಿದ್ದರು. ಈ ಚಿತ್ರದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಕರೀನಾ ಕಪೂರ್, ಅರ್ಜುನ್ ಕಪೂರ್ ಮತ್ತು ಜಾಕಿ ಶ್ರಾಫ್ ಕೂಡ ನಟಿಸಿದ್ದಾರೆ.

ಈ ಹಿಂದೆ ದೀಪಿಕಾ ಮತ್ತು ರಣವೀರ್​ ಇಬ್ಬರೂ 'ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ' (2013), 'ಬಾಜಿರಾವ್ ಮಸ್ತಾನಿ' (2015), 'ಪದ್ಮಾವತ್' (2018) ಮತ್ತು '83' (2021) ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲ ಇಬ್ಬರೂ 'ಫೈಂಡಿಂಗ್ ಫ್ಯಾನಿ' (2014) ಮತ್ತು 'ಸರ್ಕಸ್' (2023) ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.

ದೀಪಿಕಾ ಮತ್ತು ರಣವೀರ್ ಸೆಪ್ಟೆಂಬರ್ 8, 2024ರಂದು ತಮ್ಮ ಮಗಳನ್ನು ಸ್ವಾಗತಿಸಿದರು. ಈ ಜೋಡಿ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ದೀಪಾವಳಿಯಂದು ದೀಪಿಕಾ ಮತ್ತು ರಣವೀರ್ ತಮ್ಮ ಮಗಳ ಹೆಸರನ್ನು 'ದುವಾ ಪಡುಕೋಣೆ ಸಿಂಗ್' ಎಂದು ಅರ್ಥಪೂರ್ಣ ಸಂದೇಶದೊಂದಿಗೆ ಬಹಿರಂಗಪಡಿಸುವ ಮೂಲಕ ಜಗತ್ತಿಗೆ ಪರಿಚಯಿಸಿದರು. "ದುವಾ: ಅಂದರೆ ಪ್ರಾರ್ಥನೆ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿದ್ದಾಳೆ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ ಎಂದು ದಂಪತಿ ಹಂಚಿಕೊಂಡ ಪೋಸ್ಟ್​ನಲ್ಲಿ ಬರೆದಿದ್ದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net