ತಲೈವಾ ರಜನಿ ಅಭಿನಯದ ‘ಕೂಲಿ’ ರಿಲೀಸ್​ ಡೇಟ್​ ಔಟ್​​; ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ | Coolie

Untitled design - 2025-04-05T183500.692
Published on

ಚೆನ್ನೈ: ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ಕೂಲಿ'(Coolie) ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ತಯಾರಕರು ಈ ವರ್ಷವೇ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. 'ಕೂಲಿ' ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾ.

ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​​ ಅಭಿನಯದ ಈ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರತಂಡವು ಸಿನಿಮಾದಲ್ಲಿ ತಲೈವಾ ರಜನಿಕಾಂತ್​​​ರ ವಿಶಿಷ್ಟ ಲುಕ್​​ನ ಮತ್ತೊಂದು ಪೋಸ್ಟ್​​ ಅನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿನಿಮಾ ರಿಲೀಸ್ ಡೇಟ್​​​​ ಅನ್ನು ಘೋಷಿಸಿದ್ದಾರೆ. ಮುಂಬರುವ ಕೂಲಿ ಚಿತ್ರವು ರಜನಿಕಾಂತ್ ಅವರ 171ನೇ ಚಿತ್ರ ಎಂದು ಗುರುತಿಸಲ್ಪಟ್ಟಿದೆ. ಈ ಸಿನಿಮಾವು ಆಗಸ್ಟ್ 14 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಬಿಡುಗಡೆ ದಿನಾಂಕದೊಂದಿಗೆ ಹಂಚಿಕೊಂಡಿರುವ ಪೋಸ್ಟರ್​​ನಲ್ಲಿ ರಜನಿಕಾಂತ್​ ಅವರ ಒರಾಟದ ಲುಕ್​ ಅನ್ನು ಕಾಣಬಹುದಾಗಿದೆ. ಇದು ಆಕ್ಷನ್-ಪ್ಯಾಕ್ಡ್ ವೈಬ್ ಅನ್ನು ನೀಡುತ್ತವೆ.

ಸಿನಿಮಾದಲ್ಲಿ ಬಹುತಾರಗಣವನ್ನು ಕಾಣಬಹುದಾಗಿದೆ. ತೆಲುಗು ಸ್ಟಾರ್ ನಾಗಾರ್ಜುನ, ಕನ್ನಡ ಸ್ಟಾರ್ ಉಪೇಂದ್ರ, ಸೌಬಿನ್ ಶಾಹಿರ್, ಸತ್ಯರಾಜ್, ಶ್ರುತಿ ಹಾಸನ್, ರೇಬಾ ಮೋನಿಕಾ ಜಾನ್ ಮತ್ತು ಜೂನಿಯರ್ ಎಂಜಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಒಂದು ಹಾಡಿನಲ್ಲಿ ಪೂಜಾ ಹೆಗ್ಡೆ ಮತ್ತು ಅತಿಥಿ ಪಾತ್ರದಲ್ಲಿ ಬಾಲಿವುಡ್ ನಟ ಅಮೀರ್​​ ಖಾನ್​ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಚಿತ್ರತಂಡ ಈ ಊಹಾಪೋಹವನ್ನು ಇನ್ನೂ ದೃಢೀಕರಿಸಿಲ್ಲ.

ಕೂಲಿ ಚಿತ್ರದ ಸಂಗೀತವನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದಾರೆ. ಈ ಚಿತ್ರವು ಹಲವಾರು ಕಾರಣಗಳಿಗಾಗಿ ಜನರಲ್ಲಿ ಆಸಕ್ತಿಯನ್ನು ಕೆರಳಿಸಿದೆ. ಅವುಗಳಲ್ಲಿ ಒಂದು ನಟರಾದ ಸತ್ಯರಾಜ್ ಮತ್ತು ರಜನಿಕಾಂತ್ ಸುಮಾರು 38 ವರ್ಷಗಳ ನಂತರ ಈ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುವುದು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net