2024ರಲ್ಲಿ ತಾಯಿಯಾದ ಮಹಿಳೆಯರಿಗೆ ಹೊಸ ಸಂದೇಶ ಕೊಟ್ಟ ದೀಪಿಕಾ ಪಡುಕೋಣೆ

dk-59-677e695317aab
Published on

ಮುಂಬೈ: 2024ರಲ್ಲಿ ತಾಯಿಯಾದ ಮಹಿಳೆಯರಿಗೆ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಹೊಸ ವರ್ಷದಲ್ಲಿ ಹೊಸ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಹೌದು, 2024ರ ಸೆ.8ರಂದು ಹೆಣ್ಣು ಮಗವಿಗೆ ಜನ್ಮ ನೀಡುವ ಮೂಲಕ ತಾಯಿಯಾದ ದೀಪಿಕಾ ಎಲ್ಲಾ ತಾಯಂದಿರಿಗೆ ಭಾವನತ್ಮಾಕ ಮತ್ತು ಮಹಿಳೆಯರ ಸಬಲೀಕರಣ ಕುರಿತು ಹೇಳುವ ಪೋಸ್ಟ್​ವೊಂದನ್ನು ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಇದೀಗ ಈ ಪೋಸ್ಟ್​ ವೈರಲ್​ ಆಗುತ್ತಿದೆ.

‘’2024ರಲ್ಲಿ ಜನ್ಮ ನೀಡಿದ ಅಮ್ಮಂದಿರೆ..ಇದನ್ನು ನೆನಪಿಡಿ.. ವರ್ಷದ ಕೊನೆಯಲ್ಲಿ ನಿಮ್ಮ ಪ್ರಮುಖ ದಿನಗಳನ್ನು ಒಮ್ಮೆ ಹಿಂತಿರುಗಿ ನೋಡಿ. ಈ ವರ್ಷ ನಿಮ್ಮ ದೇಹ ದೊಡ್ಡದಾಗಿ ಮತ್ತೊಂದು ದೇಹಕ್ಕೆ(ಮಗು) ಜನ್ಮ ನೀಡಿದೆ ಎಂದು ನೆನಪಿಸಿಕೊಳ್ಳಿ? ಎಲ್ಲವನ್ನು ಮೀರಿ ಬೆಳದಿದ್ದಿರಾ(ಎಲ್ಲವೂ ನಿಮ್ಮಿಂದ ಸಾಧ್ಯ)'' ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹೊಸ ವರ್ಷ ಸಂಭ್ರಮ ಆಚರಿಸಿದ ರಣವೀರ್​, ದೀಪಿಕಾ

ಮುಂಬೈನ ಹೊರಗೆ ದೀಪಿಕಾ ಮತ್ತು ರಣವೀರ್ ಸಿಂಗ್ ಹೊಸ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮಾಚರಣೆಯಲ್ಲಿ ಮೊಳಗಿದರು.ಬಳಿಕ ಮಾಲ್ಡೀವ್ಸ್‌ನಲ್ಲಿ ದೀಪಿಕಾ ಹುಟ್ಟುಹಬ್ಬವನ್ನು ಆಚರಿಸಿದರು.

ಇನ್ನು ದಂಪತಿಗಳು ಇತ್ತೀಚಿಗೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ, ಫೋಟೋಗೆ ಪೋಸ್​ ನೀಡಿ ನೆರದಿದ್ದವರನ್ನು ಸಂತೋಷಪಡಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net