ದೀಪಿಕಾ ಪಡುಕೋಣೆಗೆ ಹುಟ್ಟುವ ಮಗು ಗಂಡಾ? ಹೆಣ್ಣಾ? ಖ್ಯಾತ ಜ್ಯೋತಿಷಿಯ ಶಾಕಿಂಗ್ ಭವಿಷ್ಯ..!

deepika mix
Published on

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಈ ವರ್ಷಾರಂಭ ಅಂದ್ರೆ ಫೆಬ್ರವರಿಯಲ್ಲಿ ದಂಪತಿ ಅಭಿಮಾನಿಗಳೊಂದಿಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದರು. ದೀಪಿಕಾ ಗರ್ಭಿಣಿಯಾದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

ನವೆಂಬರ್ 2018 ರಲ್ಲಿ ಮದುವೆಯಾದ ಈ ಜೋಡಿ 6 ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ಮಾಡಿದ್ದರು. ದೀಪಿಕಾಗೆ ಗಂಡು ಮಗು ಹುಟ್ಟುತ್ತಾ ಅಥವಾ ಹೆಣ್ಣು ಮಗು ಹುಟ್ಟುತ್ತಾ ಎಂದು ತಿಳಿಯಲು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಮಗುವಿನ ಜನನಕ್ಕೂ ಮುನ್ನವೇ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಖ್ಯಾತ ಜ್ಯೋತಿಷಿಯೊಬ್ಬರು ಹೊಸ ಅತಿಥಿ ಯಾರು? ಮತ್ತು ಅವರ ಆಗಮನದಿಂದ ದೀಪಿಕಾ-ರಣ್​ವೀರ್​​ ಲೈಫ್​ನಲ್ಲಿ ಏನೆಲ್ಲಾ ಬದಲಾಗಲಿದೆ ಅನ್ನೋ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದೀಪಿಕಾ ಪಡುಕೋಣೆಗೆ ಗಂಡು ಮಗು ಹುಟ್ಟುತ್ತದೆಯೇ? ಎನ್ನುವ ವಿಚಾರ ಹೆರಿಗೆಯ ನಂತರ ಬಹಿರಂಗಗೊಳ್ಳಲಿದೆ. ಇದಕ್ಕೂ ಮುನ್ನವೇ ಇದೀಗ ದೀಪಿಕಾ ಮಗು ಯಾವುದು ಅನ್ನೋ ವಿಚಾರ ಚರ್ಚೆಯಾಗುತ್ತಿದೆ.

Koimoi.com ನಲ್ಲಿನ ವರದಿಯ ಪ್ರಕಾರ, ಪಂಡಿತ್ ಜಗನ್ನಾಥ್ ಗುರೂಜಿ ಅವರು ರಣವೀರ್ ಮತ್ತು ದೀಪಿಕಾ ಜನಿಸುವ ಮಗುವಿನ ಬಗ್ಗೆ ಮಾತನಾಡಿದ್ದಾರೆ. ಪಂಡಿತ್ ಜಗನ್ನಾಥ್ ಗುರೂಜಿ ಪ್ರಸಿದ್ಧ ಜ್ಯೋತಿಷಿ ಈ ಹಿಂದೆ 2024ರಲ್ಲಿ ದೀಪಿಕಾ ಗರ್ಭಿಣಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.

ಪಂಡಿತ್ ಜಗನ್ನಾಥ ಗುರೂಜಿಯವರ ಭವಿಷ್ಯವಾಣಿಯ ಪ್ರಕಾರ, ಈ ಮಗು ತನ್ನ ಹೆತ್ತವರಿಗೆ ರಾಜಕುಮಾರನಾಗ್ತಾನೆ ಅಂದರೆ ಗಂಡು ಮಗುವಾಗುತ್ತದೆ ಎಂದಿದ್ದಾರೆ. ಆ ಮಗು ತನ್ನ ತಂದೆ ತಾಯಿ ಇಬ್ಬರಿಗೂ ಅದೃಷ್ಟ ಹೊತ್ತು ತರಲಿದ್ದಾನೆ. ರಣಬೀರ್-ದೀಪಿಕಾ ಪಾಲಿಗೆ ಆ ಮಗು ಅದೃಷ್ಟದ ಮಗುವಾಗಲಿದೆ ಎಂದು ಜ್ಯೋತಿಷಿ ಹೇಳಿದ್ದಾರೆ.

ದೀಪಿಕಾ ಗರ್ಭಿಣಿಯಾದ ಬಳಿಕವೂ ಕಲ್ಕಿ ಸಿನಿಮಾ ಪ್ರಚಾರದಲ್ಲೂ ಭಾಗವಹಿಸಿದ್ರು. ಆ ಸಿನಿಮಾದ ಶೂಟಿಂಗ್​​​ಗನ್ನೂ ಕಂಪ್ಲೀಟ್​​ ಮಾಡಿದ್ರು. ‘ಕಲ್ಕಿ 2898 AD’ ಸಿನಿಮಾ ಕೂಡ ಭರ್ಜರಿ ಪ್ರದರ್ಶನ ಕಾಣ್ತಿದೆ. ಪ್ರೆಗ್ನೆನ್ಸಿ ರಜೆಗೆ ತೆರಳುವ ಮುನ್ನವೇ ದೀಪಿಕಾ ‘ಸಿಂಗಂ ಅಗೇನ್’ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net