

Deepavali Special Sweets Rave Unde : ಹಬ್ಬ ಹರಿದಿನಗಳಲ್ಲಿ ಮನೆಗಳಲ್ಲಿ ಸಿಹಿ ಮಾಡೋದು ಸಾಮಾನ್ಯ. ರೆವ ಉಂಡೆ, ಬೇಸನ ಉಂಡೆ, ಶೇಂಗಾ ಲಾಡು ಇವುಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ ತಿಂದಿದ್ದೇವೆ. ಇವುಗಳ ಹಾಗೇ ಅತಿ ಕಡಿಮೆ ಸಮಯದಲ್ಲಿ ಮಾಡುವ ಹಾಗೂ ಸ್ವಾಧೀಷ್ಟಕರ ಸಿಹಿ ಅಂದರೇ ಅದುವೆ ರವೆ ಲಾಡು. ದೀಪಾವಳಿ ಇನ್ನೇನು ಕೆಲವು ದಿನ ಬಾಕಿ ಇದೆ. ನೀವು ಇದನ್ನು ಸುಲಭವಾಗಿ ಮನೆಯಲ್ಲಿ ಮಾಡಬಹುದು.
ಏಲಕ್ಕಿ - ಸ್ವಲ್ಪ
ಸಕ್ಕರೆ - 2 ಗ್ಲಾಸ್
ಸಜ್ಜಿಗೆ ರವಾ - 2 ಗ್ಲಾಸ್
ತುಪ್ಪ- ಅರ್ಧ ಕಪ್
ಬಾದಾಮಿ- ಸ್ವಲ್ಪ
ದ್ರಾಕ್ಷಿ - ಸ್ವಲ್ಪ
ಗೋಡಂಬಿ- ಸ್ವಲ್ಪ
ಬೇಕಾಗುವ ಸಾಮಗ್ರಿಗಳು
ಒಂದು ಬಾಣಲಿಯಲ್ಲಿ ತುಪ್ಪ, ಗೋಡಂಬಿ, ದ್ರಾಕ್ಷಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ, ಅದು ಕಂದು ಬಣ್ಣಕ್ಕೆ ಬಂದ ನಂತರ ತೆಗೆದು ಅದೇ ಬಾಣಲಿಯಲ್ಲಿ ಸಜ್ಜಿಗೆ ರವಾ ಹಾಕಿ ಪರಿಮಳ ಬರುವ ಹಾಗೇ ಚೆನ್ನಾಗಿ ಹುರಿದುಕೊಳ್ಳಿ.
ಮಾಡುವ ವಿಧಾನ :
ನಂತರ ಸಕ್ಕರೆಗೆ ಸ್ವಲ್ಪ ನೀರು ಹಾಕಿ ಪಾಕ ಮಾಡಿ, ನಂತರ ಅದರಲ್ಲಿ ಸಜ್ಜಿಗೆ ರವಾ, ಗೋಡಂಬಿ, ದ್ರಾಕ್ಷಿ, ಬದಾಮಿ, ಏಲಕ್ಕಿ ಹಾಕಿ ಮಿಕ್ಸ್ ಮಾಡಿ ಲಾಡು ಕಟ್ಟುವ ಹದ ಬರುವವರೆಗೂ ಮಿಶ್ರಣ ಮಾಡಿಕೊಳ್ಳಿ.
ನಂತರ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ರವೆ ಮಿಶ್ರಣ ಸ್ವಲ ಬಿಸಿ ಇರುವಾಗಲೇ ಅದನ್ನು ಉಂಡೆ ಮಾಡಿಕೊಳ್ಳಿ, ನಂತರ ರುಚಿಕರವಾದ ಲಾಡು ಸವಿಯಲು ಸಿದ್ದವಾಗುತ್ತದೆ. ಈ ಬಾರಿಯ ದೀಪಾವಳಿಯನ್ನಿ ಸಿಹಿಯಾದ ರವೆ ಉಂಡೆ ಸವಿಯುವುದರ ಜತೆಗೆ ಆಚರಿಸಿ....