ಇದು ನಿಜಕ್ಕೂ ಅಪಾಯಕಾರಿ...ಅಕ್ಷಯ್ ಕುಮಾರ್ ಡೀಪ್ ಫೇಕ್ ವಿಡಿಯೋ ತೆಗೆದುಹಾಕುವಂತೆ ಬಾಂಬೆ ಹೈಕೋರ್ಟ್​ ಸೂಚನೆ! Akshay Kumar

Akshay kumar
Published on

Akshay Kumar: ಕೃತಕ ಬುದ್ಧಿಮತ್ತೆ (AI) ಆಧಾರಿತ ಡೀಪ್‌ಫೇಕ್ ವಿಡಿಯೋಗಳು ಮತ್ತು ನಟ ಅಕ್ಷಯ್ ಕುಮಾರ್ ಅವರ ಮಾರ್ಫ್ ಮಾಡಿದ ಚಿತ್ರಗಳ ಪ್ರಸಾರವನ್ನು ನಿಲ್ಲಿಸಲು ಬಾಂಬೆ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಇಂತಹ ವಿಷಯಗಳು ಹೆಚ್ಚು ಕಳವಳಕಾರಿ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹಾನಿಕಾರಕ ಎಂದು ನ್ಯಾಯಾಲಯ ಸೂಚಿಸಿದೆ.

ಅಕ್ಷಯ್ ​ಕುಮಾರ್​ ಕೋಮು ಪ್ರಚೋದನ ಹೇಳಿಕೆಗಳು ಮತ್ತು ರಿಷಿ ವಾಲ್ಮಿಕಿ ಬಗ್ಗೆ ಉಲ್ಲೇಖಗಳನ್ನು ಮಾಡಿದ್ದಾರೆ ಎಂದು ಹೆಳಲಾಗುತ್ತಿರುವ ಡೀಪ್​ ಫೇಕ್​ ವಿಡಿಯೋಗಳು ನಟನ ಖ್ಯಾತಿಗೆ ಹಾನಿ ಮಾಡುವ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಗಮನಿಸಿದ ಡಾ. ನ್ಯಾಯಮೂರ್ತಿ ಆರಿಫ್ ಎಸ್ ತಾತ್ಕಾಲಿಕ ಪರಿಹಾರವನ್ನು ನೀಡಿದ್ದಾರೆ.

ಈ ಮಾರ್ಫಿಂಗ್ ಎಷ್ಟು ಸೂಕ್ಷ್ಮ ಮತ್ತು ಮೋಸದಾಯಕವಾಗಿದೆ ಎಂದರೆ ಇವು ನಿಜವಾದ ವಿಡಿಯೋ ಅಥವಾ ಚಿತ್ರಗಳಲ್ಲ ಎಂದು ಗುರುತಿಸುವುದು ಕಷ್ಟ ಎಂದು ತಿಳಿಸಿದ್ದಾರೆ.

ಇಂತಹ ವಿಷಯಗಳು ಹೆಚ್ಚು ಅಪಾಯಕಾರಿ ಹಾಗಾಗಿ ಈ ವೀಡಿಯೊಗಳು ನಟನ ವ್ಯಕ್ತಿತ್ವ ಮತ್ತು ನೈತಿಕ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ, ಅವರ ಕುಟುಂಬದ ಸುರಕ್ಷತೆ ಮೇಲೂ ಗಂಭೀರ ಹಾನಿ ಉಂಟಾಗುತ್ತದೆ. ಹಾಗೆಯೇ ಸಮಾಜ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಮತ್ತು ವ್ಯಾಪಕವಾಗಿ ಪರಿಣಾಮ ಬೀರುತ್ತವೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಗಳು ನಕಲಿ ವಿಷಯಗಳ ರಚನೆ ಮತ್ತು ಪ್ರಸಾರದಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಾಲಯದ ಸೂಚನೆಗಳೇನು?

ಪ್ರತಿವಾದಿಗಳಿಗೆ ನೊಟೀಸ್​ ಜಾರಿ ಮಾಡುವ ಮೊದಲೇ ಪರಿಹಾರ ಒದಗಿಸುವುದು ಅತ್ಯಗತ್ಯ ಎಂದು ಪೀಠವು ಹೇಳಿದ್ದು, ಇಂತಹ ವಿಚಾರಗಳನ್ನು ಸಾರ್ವಜನಿಕ ವಲಯದಿಂದ ತಕ್ಷಣವೇ ತೆಗೆದುಹಾಕಬೇಕು. ಇದು ಅರ್ಜಿದಾರರ ಹಿತಾಸಕ್ತಿಯಲ್ಲದೇ, ಸಾರ್ವಜನಿಕ ಹಿತಾಸಕ್ತಿಯಾಗಿದೆ ಎಂದು ತಿಳಿಸಿತು.

ಆದಾಗ್ಯೂ, ನ್ಯಾಯಾಲಯವು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಇ-ಕಾಮರ್ಸ್​ ವೆಬ್​ಸೈಟ್​ಗಳಲ್ಲಿ ಬಳಸಿಕೊಂಡ ಅಕ್ಷಯ್​ ಕುಮಾರ್​ ಹೆಸರು ಮತ್ತು ಚಿತ್ರವನ್ನು ತೆಗೆದುಹಾಕಬೇಕು. ಹಾಗೆಯೇ ವಿಷಯವನ್ನು ಅಪ್ಲೋಡ್ ಮಾಡಿದ ಹಾಗೂ ಪ್ರಸಾರ ಮಾಡಿದ ಮಾರಾಟಗಾರರ ವಿವರಗಳನ್ನು ಒದಗಿಸುವಂತೆ ಸೂಚಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net