

ಹುಣಸೂರು: ದೀನಿತಾಲಿಂ ತರಬೇತಿ ಪಡೆಯುವ ಮೂಲಕ ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಾಮೀಯಾ ಮಸೀದಿ ಅಧ್ಯಕ್ಷ ಹಜರತ್ ಜಾನ್ ತಿಳಿಸಿದರು.
ನಗರದ ಬಜಾರ್ ರಸ್ತೆಯಲ್ಲಿರುವ ಜಾಮೀಯಾ ಮಸೀದಿಯಲ್ಲಿ ಮಸೀದಿ ಸಮಿತಿಯಿಂದ ಆಯೋಜನೆಗೊಂಡಿದ್ದ ದೀನಿತಾಲಿಂ ತರಬೇತಿ ಕಾರ್ಯಕ್ರಮದ ಸಮಾರೋಪ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆ ವಿತರಿಸಿ ಮಾತನಾಡಿದರು. ದೀನಿತಾಲಿಂ ಒಂದು ಧಾರ್ಮಿಕ ಶಿಬಿರವಾಗಿದ್ದು, ಮಕ್ಕಳಲ್ಲಿ ಕುರಾನ್ ಪಠಣ, ನಮಾಜ್ ಮಾಡುವ ರೀತಿ ನೀತಿಗಳು, ಉಪಯೋಗ ಮುಂತಾದವುಗಳ ಕುರಿತು ಮಕ್ಕಳಿಗೆ ತರಬೇತಿ ನೀಡಲಾಗುವುದು. ಪೋಷಕರು ತಮ್ಮ ಮಕ್ಕಳಿಗೆ ದೀನಿ ತಾಲಿಂ ಬಗ್ಗೆ ಕಾಳಜಿ ವಹಿಸುವಲ್ಲಿ ಆಸಕ್ತಿ ತೋರಿಸಬೇಕು ಹಾಗೂ ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಿತಿ ಉಪಾಧ್ಯಕ್ಷ ಮಹಮ್ಮದ್ ಅಮರ್, ಕಾರ್ಯದರ್ಶಿ ಶಹಜಮಾ, ಇನಾಯತುಲ್ಲಾ ಖಾನ್, ಸದಸ್ಯರಾದ ಬಷೀರ್ ಅಹಮದ್, ಅತಾವುಲ್ಲಾ ಷರೀಫ್, ಖಾಲಿದ್ ಪಾಷ, ಅಜ್ಮಲ್ ಬೇಗ್, ಮಸೂದ್ ಅಹಮದ್‌ಖಾನ್, ಮುನ್ವರುದ್ದೀನ್ ಖಾನ್, ಮಹಮೂದ್, ಫಜಲ್, ಎಚ್.ಎಂ.ಪಾಷ, ಮುಖ್ಯ ಹಿರಿಯ ಗುರುಗಳಾದ ಶಾಲಂ, ಕಿರಿಯ ಗುರುಗಳಾದ ಆಜಂ, ರಫೀ, ಅಂಜದ್ ಷರೀಫ್ ಇನ್ನಿತರು ಹಾಜರಿದ್ದರು.