

ನವದೆಹಲಿ: ಕಳೆದ 3 ವರ್ಷಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಆಗುವವರ ಸಂಖ್ಯೆಯಲ್ಲಿ 24% ಇಳಿಕೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
2020ರಲ್ಲಿ 68% ಜನರು ನಿಶ್ಚಯಿಸಿದ ವಿವಾಹ (ಅರೇಂಜ್ಡ್ ಮ್ಯಾರೇಜ್) ಆಗಿದ್ದರೆ 2023ರಲ್ಲಿ ಅದು 44%ಗೆ ತಲುಪಿದೆ. ಕಳೆದ 3 ವರ್ಷಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಆಗುವವರ ಸಂಖ್ಯೆಯಲ್ಲಿ 24%ನಷ್ಟು ಇಳಿಕೆಯಾಗಿದೆ ಎಂದು ಸರ್ವೆ ಹೇಳಿದೆ. ಭಾರತದಲ್ಲಿ ಮದುವೆ ಎನ್ನುವುದು ಜನ್ಮಾಂತರದ ಬಂಧವೆಂದು ಭಾವಿಸಲಾಗುತ್ತದೆ. ಕೇವಲ ಹುಡುಗ-ಹುಡುಗಿ ಮಾತ್ರವಲ್ಲ, 2 ಕುಟುಂಬಗಳನ್ನು ಒಗ್ಗೂಡಿಸುವುದಾಗಿದೆ. ಜೀವನ ಸಂಗಾತಿಗಾಗಿ ಕುಟುಂಬದವರು ಹುಡುಕಾಟ ನಡೆಸಿ ಮದುವೆ ಮಾಡುವುದನ್ನು ಅರೇಂಜ್ಡ್ ಮ್ಯಾರೇಜ್ ಎನ್ನುತ್ತಾರೆ.
ಅರೇಂಜ್ಡ್ ಮ್ಯಾರೇಜ್ನಲ್ಲಿ ವಧು-ವರರು ಒಬ್ಬರಿಗೊಬ್ಬರು ಮೊದಲೇ ತಿಳಿದಿರುವುದಿಲ್ಲ. ಕುಟುಂಬದವರು ನಿಶ್ಚಯಿಸಿದವರನ್ನು ಮದುವೆಯಾಗುತ್ತಾರೆ. ಆದರೆ ಕೆಲ ವರ್ಷಗಳಿಂದ ಪ್ರೇಮ ವಿವಾಹದ ಟ್ರೆಂಡ್ ಹೆಚ್ಚಾಗಿದೆ. ಹುಡುಗ-ಹುಡುಗಿ ಪರಸ್ಪರ ಮೆಚ್ಚಿ ಮದುವೆಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೆಸಾಮಾನ್ಯವಾಗುತ್ತಿದೆ. ಸರ್ವೆ ಪ್ರಕಾರ ಕಳೆದ 3 ವರ್ಷಗಳಲ್ಲಿ ಪ್ರೇಮ ವಿವಾಹವಾಗುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಆನ್ಲೈನ್ ಪರಿಣಾಮ: ಪ್ರೇಮ ವಿವಾಹವಾಗುವ ಜೋಡಿಗಳು ಇಂದು ನಿಶ್ಚಯಿಸಿದ ರೀತಿಯಲ್ಲಿಯೇ ಮದುವೆಯಾಗುತ್ತಿದ್ದಾರೆ. ಮದುವೆಯ ಬಜೆಟ್ನಿಂದ ಹಿಡಿದು ಮಾರಾಟಗಾರರವರೆಗೆ ಎಲ್ಲಾ ಕೆಲಸ ಆನ್ಲೈನ್ ಮೂಲಕ ಮಾಡಲಾಗುತ್ತಿದೆ.ಮದುವೆ ಮಾಡಿಸುವ ಕಂಪನಿಗಳು ಟ್ರೆಂಡ್ ಆಧಾರದಡಿ ಜೋಡಿಗಳನ್ನು ಒಂದುಗೂಡಿಸುತ್ತಿ ದ್ದಾರೆ. ಆನ್ಲೈನ್ ಉಪಯೋಗಿಸುವವರ ಸಂಖ್ಯೆ 11%ನಷ್ಟು ಹೆಚ್ಚಾಗಿದೆ.