ಸ್ತ್ರೀಯರಲ್ಲಿ ಫಲವಂತಿಕೆ ಪ್ರಮಾಣ ಇಳಿಕೆ

Pregnancy
Published on

ನವದೆಹಲಿ: ದೇಶದಲ್ಲಿ ಮಹಿಳೆಯರ ಲವಂತಿಕೆ ಇಳಿಮುಖವಾಗಿದೆ. ಇದು ಎಲ್ಲ ಸಮುದಾಯದ ಸ್ತ್ರೀಯರಲ್ಲೂ ಕಂಡುಬಂದಿದೆ ಎಂದು 5ನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (ಎನ್​ಎಫ್​​ಎಚ್​ಎಸ್​-5) ಹೇಳಿದೆ.

2015&16ರಲ್ಲಿ ನಡೆದ ಎನ್​ಎಫ್​​ಎಚ್​ಎಸ್​-4ರಲ್ಲಿ ಲವಂತಿಕೆಯ ಪ್ರಮಾಣವು ಶೇ. 2.2 ಇತ್ತು. 2019&21ರಲ್ಲಿ ಈ ಪ್ರಮಾಣ ಶೇ. 2ಕ್ಕೆ ತಗ್ಗಿದೆ. ಪ್ರತಿ ಮಹಿಳೆಯ ಸರಾಸರಿ ಸಂತಾನೋತ್ಪತ್ತಿ ದರದಲ್ಲಿ (ಟಿಎ್​ಆರ್​) ಮುಂಚೂಣಿಯಲ್ಲಿದ್ದ ಮುಸ್ಲಿಮರಲ್ಲೂ ಲವಂತಿಕೆ ಪ್ರಮಾಣ ಶೇ. 2.62 ರಿಂದ ಶೇ. 2.36ಕ್ಕೆ ಕುಗ್ಗಿದೆ. ಆದರೂ ಇತರ ಸಮುದಾಯಗಳ ಸ್ತ್ರೀಯರ ಲವಂತಿಕೆಗೆ ಹೋಲಿಸಿದರೆ ಮುಸ್ಲಿಂ ಮಹಿಳೆಯರಲ್ಲಿ ಟಿಎಫ್​​ಆರ್​ ಹೆಚ್ಚಿದೆ. ಎನ್​ಎಫ್​ಎಚ್​ಎಸ್​-5ರಲ್ಲಿ ಸಿಖ್ಖರು, ಜೈನರಲ್ಲಿ ಲವಂತಿಕೆ ಹೆಚ್ಚಿದೆ.

ಸಿಖ್ಖರಲ್ಲಿ ಎನ್​ಎಫ್​​ಎಚ್​ಎಸ್​-4ರಲ್ಲಿ ಶೇ. 1.58 ಇದ್ದಿದ್ದು, ಈಗ ಶೇ. 1.61ಕ್ಕೆ ಹಿಗ್ಗಿದೆ. ಜೈನರಲ್ಲಿ ಎನ್​ಎಫ್​​ಎಚ್​ಎಸ್​-4ರಲ್ಲಿ ಶೇ. 1.2 ಇದ್ದಿದ್ದು, ಈಗ ಶೇ. 1.6ಕ್ಕೆ ವೃದ್ಧಿ ಕಂಡಿದೆ. ಎನ್​ಎಫ್​ಎಸ್​ಎಸ್​ ಮೊದಲ (1992-93) ಸರ್ವೇಯಲ್ಲಿ ಮುಸ್ಲಿಮರ ಲವಂತಿಕೆ ದರ ಶೇ. 4.1 ಇತ್ತು. ಆಗ ಹಿಂದುಗಳಲ್ಲಿ ಈ ಪ್ರಮಾಣ ಶೇ. 3.3 ಇತ್ತು. ಕೆಸ್ತರು ಮತ್ತು ಸಿಖ್ಖರು 3ನೇ ಸ್ಥಾನದಲ್ಲಿ ಇದ್ದರು.

ಗರ್ಭನಿರೋಧಕ ಬಳಕೆ ಹೆಚ್ಚಳ

ಗರ್ಭನಿರೋಧಕ ಬಳಕೆ ಶೇ. 67ಕ್ಕೆ ಅಧಿಕವಾಗಿದೆ. ಗರ್ಭನಿರೋಧಕ ಸಾಧನಗಳ ಬಳಕೆ ಶೇ. 48ರಿಂದ ಶೇ. 56ಕ್ಕೆ ಹೆಚ್ಚಿದೆ. ಸಂತಾನಶಕ್ತಿಹರಣ (ಶೇ.38), ಕಾಂಡಮ್​ (ಶೇ.9.5%) ಬಳಕೆ ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net