ಪ್ರಣಬ್​ ಮುಖರ್ಜಿ ಆರೋಗ್ಯ ಮತ್ತಷ್ಟು ಕ್ಷೀಣ; ಶ್ವಾಸಕೋಶದ ಸೋಂಕು ಉಲ್ಬಣ

Pranab Mukharjee
Published on

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದೆ ಎಂದು ದೆಹಲಿಯ ಆರ್ಮಿ ಆಸ್ಪತ್ರೆ ಮಾಹಿತಿ ನೀಡಿದೆ.

ಕಳೆದ 20 ದಿನಗಳಿಂದಲೂ ಆಸ್ಪತ್ರೆಯಲ್ಲಿಯೇ ಇದ್ದಾರೆ. ಮಿದುಳು ಸರ್ಜರಿಗಾಗಿ ಆಸ್ಪತ್ರೆಗೆ ಹೋಗಿದ್ದ ಅವರಲ್ಲಿ ಕರೊನಾ ಸೋಂಕು ಕೂಡ ದೃಢಪಟ್ಟಿತ್ತು. ಸರ್ಜರಿಯ ನಂತರ ಅವರ ಆರೋಗ್ಯ ಸುಧಾರಿಸಲಿಲ್ಲ. ಪ್ರಣಬ್​ ಮುಖರ್ಜಿ ಇನ್ನೂ ಕೋಮಾದಲ್ಲೇ ಇದ್ದಾರೆ. ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇಂದು ಪ್ರಣಬ್​ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಹೆಲ್ತ್​ಬುಲೆಟಿನ್​ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕರೊನಾ ಕೋಲಾಹಲ: ಶಾಸಕರೇ ನೀವು ಸೋಂಕಿತರು ಎನ್ನುವಷ್ಟರಲ್ಲಿಯೇ ಬಂತು ನೆಗೆಟಿವ್‌ ವರದಿ!

ಪ್ರಣಬ್ ಮುಖರ್ಜಿಯವರ ಶ್ವಾಸಕೋಶದ ಸೋಂಕು ಮತ್ತಷ್ಟು ಉಲ್ಬಣಗೊಂಡಿದ್ದು, ಅಲ್ಲಿಯೇ ಸೆಪ್ಟಿಕ್​ ಆಗಿದೆ. ವಿಶೇಷ ತಜ್ಞರ ತಂಡ ಚಿಕಿತ್ಸೆ ಮುಂದುವರಿಸಿದೆ ಎಂದು ಹೇಳಿದೆ. ಪ್ರಣಬ್​ ಮುಖರ್ಜಿಯವರಿಗೆ 84ವರ್ಷ ವಯಸ್ಸಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net