More

    ಅಮ್ಮ, ಅಣ್ಣನನ್ನು ಕೊಂದ ಬಾಲಕಿ; ಮೊದಲು ವಾಶ್​ ರೂಂನಲ್ಲಿ ಮಾಡಿದ್ದೇನು? ಬೆಚ್ಚಿ ಬೀಳಿಸುವ ಡಬಲ್​ ಮರ್ಡರ್​

    ಲಖನೌ: ಬಾಲಕಿಯೋರ್ವಳು ಮಾಡಿದ ಭೀಕರ ಡಬಲ್​ ಮರ್ಡರ್​​ಗೆ ಇಡೀ ಲಖನೌ ಜನತೆ ಬೆಚ್ಚಿಬಿದ್ದಿದೆ. ಗೌತಂಪಲ್ಲಿ ಕಾಲನಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    10ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ತನ್ನ ತಾಯಿ ಮತ್ತು ಸೋದರನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಬಾಲಕಿ ರಾಷ್ಟ್ರಮಟ್ಟದ ಶೂಟರ್​ ಆಗಿದ್ದು, ಅವಳ ಮಾನಸಿಕ ಸ್ಥಿತಿ ಸದ್ಯ ಸ್ಥಿರವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ತಾಯಿ ಮತ್ತು ಸೋದರನಿಗೆ ಗುಂಡು ಹಾರಿಸುವ ಮೊದಲು ಇವಳು ತಮ್ಮ ಮನೆಯ ವಾಶ್​ ರೂಂನಲ್ಲಿರುವ ಗಾಜಿನ ಕನ್ನಡಿಯ ಮೇಲೆ disqualified human ಎಂದು ಬರೆದಿದ್ದಾಳೆ. ಹಾಗೇ ಮೊದಲ ಗುಂಡನ್ನು ಆ ಗ್ಲಾಸ್​ಗೆ ಹೊಡೆದಿದ್ದಾಳೆ. ಎರಡನೇ ಗುಂಡು ತಾಯಿಗೆ ಮತ್ತು ಮೂರನೇಯದನ್ನು ಸೋದರನಿಗೆ ಹೊಡೆದಿದ್ದಾಳೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಆಕೆಯ ತೋಳಿನ ಮೇಲೆ ರೇಜರ್​​ನಿಂದ ಹಲವು ಬಾರಿ ಕತ್ತರಿಸಿಕೊಂಡಿದ್ದಾಳೆ. ಆ ರೇಜರ್​​ನ್ನೂ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಬಾಲಕಿಯನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಸಭೆ, ಸಮಾರಂಭಕ್ಕೆ ಅನುಮತಿ; ಸೆ.7ರಿಂದ ಮೆಟ್ರೋ ಸಂಚಾರ; ಶಾಲಾ-ಕಾಲೇಜು ಬಂದ್​; ಅನ್​ಲಾಕ್​ 4.0 ಮಾರ್ಗಸೂಚಿ

    ಈ ವಿದ್ಯಾರ್ಥಿನಿ ಹತ್ಯೆ ಮಾಡುವಾಗ ಕೆಲಸದವರೂ ಕೂಡ ಮನೆಯಲ್ಲಿದ್ದರು. ಮೃತ ದೇಹಗಳನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿದೆ. ಮೇಲ್ನೋಟಕ್ಕೆ ಏನೂ ಗೊತ್ತಾಗುತ್ತಿಲ್ಲ ಎಂದು ಪೊಲೀಸ್​ ಕಮಿಷನರ್​ ತಿಳಿಸಿದ್ದಾರೆ.

    ಉತ್ತರ ಪ್ರದೇಶದ ಡಿಜಿಪಿ ಹಿತೇಶ್​ ಚಂದ್ರ ಅಶ್ವಥಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಬಾಲಕಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೋರ್ವರ ಮಗಳು ಎನ್ನಲಾಗಿದೆ. ಗೌತಂಪಲ್ಲಿಯಲ್ಲಿರುವ ರೈಲ್ವೆ ಕ್ವಾರ್ಟರ್ಸ್​​​ನಲ್ಲಿ ಈ ಕುಟುಂಬ ವಾಸವಾಗಿತ್ತು. ಬಾಲಕಿಯ ತಂದೆಯಿಂದಲೂ ಹೇಳಿಕೆ ಪಡೆಯಲಾಗಿದೆ.

    ಮಾವನ ಹತ್ಯೆ, ಅತ್ತೆಯ ಪರಿಸ್ಥಿತಿ ತೀವ್ರ ಗಂಭೀರ: ಇದು ಸುರೇಶ್​ ರೈನಾ ವಾಪಸ್​ ಆಗಲು ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts