ವರ್ಷಾಂತ್ಯಕ್ಕೆ ಮೆಗಾ ಕ್ಲ್ಯಾಷ್! : ‘45’, ‘ಮಾರ್ಕ್’ ಜತೆ ಡಜನ್‌ಗೂ ಹೆಚ್ಚು ಸಿನಿಮಾಗಳು ರಿಲೀಸ್

45, ಮಾರ್ಕ ಚಿತ್ರದ ಪೋಸ್ಟರ್​
45, ಮಾರ್ಕ ಚಿತ್ರದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ವರ್ಷಾಂತ್ಯದಲ್ಲಿ ಬಾಕ್ಸಾಫೀಸ್ ನಲ್ಲಿ ಹಗ್ಗಜಗ್ಗಾಟ
  • ಕನ್ನಡ ಸಿನಿಮಾಗಳು ಎದುರು ಬರಲಿವೆ ಪರಭಾಷೆ ಸಿನಿಮಾಗಳು
  • ಕ್ರಿಸ್ಮಸ್ ರಜೆ ಯಾರಿಗೆ ವರವಾಗಲಿದೆ ಎಂಬುದೇ ಕುತೂಹಲ

ಬೆಂಗಳೂರು:ಪ್ರತಿಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯಜತೆಗೆ ಚಿತ್ರರಂಗವೂ ಬಾಕ್ಸಾಫೀಸ್ಹಬ್ಬ ಆಚರಿಸುವುದು ಸಾಮಾನ್ಯ.ಸಿಗುವಸಾಲು ರಜೆಗಳನ್ನು ಸದುಪಯೋಗಪಡಿಸಿಕೊಳ್ಳಲುಚಿತ್ರತಂಡಗಳು ನಾ ಮುಂದು,ತಾಮುಂದು ಅಂತ ಮೊದಲೇ ರಿಲೀಸ್ ದಿನಾಂಕಘೋಷಿಸಿಬಿಡುತ್ತವೆ.ಆದರೆ,ಈವರ್ಷ ಹಿಂದಿನ ವರ್ಷಗಳಿಗಿಂತಚಿತ್ರಗಳ ನಡುವಿನ ಬಾಕ್ಸಾಫೀಸ್ಹಗ್ಗಜಗ್ಗಾಟ ಕೊಂಚ ಹೆಚ್ಚಿರಲಿದೆ.ಅದಕ್ಕೆಕಾರಣ ಕನ್ನಡದಲ್ಲೇ ಬಹುನಿರೀಕ್ಷಿತ‘45’ಮತ್ತು‘ಮಾರ್ಕ್’ ಚಿತ್ರಗಳು ತೆರೆಗೆಬರಲಿದ್ದು,ಜತೆಗೆಹಿಂದಿ,ತೆಲುಗು,ತಮಿಳುಮತ್ತು ಮಲಯಾಳಂನಲ್ಲೂ ಹಲವುಸಿನಿಮಾಗಳು ರಿಲೀಸ್ ಆಗಲು ಸಿದ್ಧತೆನಡೆಸಿವೆ.ಹಾಗಾದರೆಈ ಬಾರಿ ಕ್ರಿಸ್ಮಸ್ ಹಬ್ಬಕ್ಕೆಸಂತಾ ಕ್ಲಾಸ್ ಯಾವ ಚಿತ್ರಕ್ಕೆಸರ್‌ಪ್ರೈಸ್ ನೀಡಲಿದ್ದಾನೆಎಂಬುದು ಕುತೂಹಲ ಮೂಡಿಸಿದೆ.

‘45’ಹೊಸಅಲೆ:

ಸಂಗೀತನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲನಿರ್ದೇಶನದ ‘45’ಇದೇ25ರಂದುರಿಲೀಸ್ ಆಗುತ್ತಿದೆ.ಶಿವರಾಜಕುಮಾರ್,ಉಪೇಂದ್ರಮತ್ತು ರಾಜ್ ಬಿ.ಶೆಟ್ಟಿಮುಖ್ಯಭೂಮಿಕೆಯಲ್ಲಿರುವ ಕಾರಣಈ ಚಿತ್ರದ ಬಗ್ಗೆ ನಿರೀಕ್ಷೆಹೆಚ್ಚಿದೆ.ಈಗಾಗಲೇಟ್ರೇಲರ್,ಟೀಸರ್ಮೂಲಕ ಸದ್ದು ಮಾಡಿರುವ ಈ ಸಿನಿಮಾಕರ್ನಾಟಕ ಮಾತ್ರವಲ್ಲ ದೇಶ,ವಿದೇಶಗಳಲ್ಲೂಕ್ರೇಜ್ ಹೆಚ್ಚಿಸಿದೆ.ಕೆನಡಾದಲ್ಲಿಈಗಾಗಲೇ ಮುಂಗಡ ಬುಕಿಂಗ್ಆರಂಭವಾಗಿದ್ದು,ಹೌಸ್‌ುಲ್ಆಗಿದೆ.ಪ್ಯಾನ್ಇಂಡಿಯಾ ರೂಪದಲ್ಲಿ ರಿಲೀಸ್ಆಗುತ್ತಿರುವ ಈ ಚಿತ್ರಕ್ಕೆರಾಜ್ಯವಷ್ಟೇ ಅಲ್ಲದೇ ನೆರೆರಾಜ್ಯದಲ್ಲೂ ಹವಾ ಎಬ್ಬಿಸಿದೆ.

ಸುದೀಪ್‌ಗೆವಿಜಯದ ‘ಮಾರ್ಕ್’

45’ರಿಲೀಸ್ಆದ ದಿನವೇ ಕಿಚ್ಚ ಸುದೀಪ್ ಅಭಿನಯದ‘ಮಾರ್ಕ್’ ತೆರೆಗೆ ಬರಲಿದೆ.‘ಮ್ಯಾಕ್ಸ್’ವಿಜಯದ ಬಳಿಕ ನಿರ್ದೇಶಕ ವಿಜಯ್ಕಾರ್ತಿಕೇಯನ್ ಮತ್ತು ಸುದೀಪ್‘ಮಾರ್ಕ್’ ಮೂಲಕ ಮತ್ತೆ ಒಂದಾಗಿರುವಕಾರಣ ನಿರೀಕ್ಷೆ ಹೆಚ್ಚಿಸಿದೆ.ತಮಿಳಿನಯೋಗಿಬಾಬು,ನವೀನ್ಚಂದ್ರ,ವಿಕ್ರಾಂತ್,ಮಲಯಾಳಂನಗುರು ಸೋಮುಸುಂದರಂ,ಶೈನ್ಟಾಮ್ ಚಾಕೋ ಕಲಾಬಳಗದಲ್ಲಿದ್ದಾರೆ.ಈಕಾರಣಕ್ಕಾಗಿ ರಾಜ್ಯವಷ್ಟೇ ಅಲ್ಲದೇನೆರೆ ರಾಜ್ಯದಲ್ಲೂ ‘ಮಾರ್ಕ್’ಸದ್ದು ಮಾಡಲಿದೆ.

ಮೋಹನ್ಲಾಲ್ ವೃಷಭ

ಕನ್ನಡದಎರಡು ಬಹುನಿರೀಕ್ಷಿತ ಚಿತ್ರಗಳಜತೆ ಮಲಯಾಳಂ ನಟ ಮೋಹನ್ ಲಾಲ್ ಹಾಗೂಕನ್ನಡದ ‘ರನ್ನ’,‘ಮುಕುಂದಮುರಾರಿ’ ನಿರ್ದೇಶಕ ನಂದ ಕಿಶೋರ್ಕಾಂಬಿನೇಷನ್‌ನ ‘ವೃಷಭ’ ಕೂಡ25ರಂದುರಿಲೀಸ್ ಆಗುತ್ತಿದೆ.ಕನ್ನಡಿಗರಾದಸಮರ್ಜಿತ್ ಲಂಕೇಶ್,ರಾಗಿಣಿದ್ವಿವೇದಿ,ಗರುಡರಾಮ್,ಕಿಶೋರ್ಕುಮಾರ್, ‘ಬಿಗ್‌ಬಾಸ್ಕನ್ನಡ 12’ರಸ್ಪರ್ಧಿ ಮ್ಯೂಟೆಂಟ್ ರಘುಅಭಿನಯಿಸಿದ್ದಾರೆ.ಆ್ಯಕ್ಷನ್,್ಯಾಂಟಸಿ,ಪೀರಿಯಾಡಿಕ್ಜಾನರ್‌ನ ‘ವೃಷಭ’ ಈಗಾಗಲೇ ಟ್ರೇಲರ್ಮೂಲಕ ಗಮನ ಸೆಳೆದಿದ್ದು,‘45’ ಹಾಗೂ‘ಮಾರ್ಕ್’ಗೆ ಸ್ಪಧೆಯೊಡ್ಡುವಲಕ್ಷಣಗಳು ಗೋಚರವಾಗುತ್ತಿವೆ.

‘ಅನಕೊಂಡ’ಬಂತು

ಈವರ್ಷಾಂತ್ಯಕ್ಕೆ ಹಾಲಿವುಡ್‌ನ‘ಅನಕೊಂಡ’ ಕೂಡ ತೆರೆಗೆ ಬರಲಿದೆ.ಟಾಮ್ಗೊರ್ಮಿಕನ್ ನಿರ್ದೇಶನದ ಈ ಹಾಲಿವುಡ್ಚಿತ್ರವನ್ನು ರಾಜ್ಯದಲ್ಲಿ ಹೊಂಬಾಳೆಫಿಲಂಸ್ ವಿತರಣೆ ಮಾಡುತ್ತಿದೆ.ಮಲ್ಟಿಪ್ಲೆಕ್ಸ್‌ಗಳಲ್ಲಿಸಾಮಾನ್ಯವಾಗಿ ಹಾಲಿವುಡ್ ಚಿತ್ರಗಳಿಗೆಹೆಚ್ಚು ಪ್ರಾಧಾನ್ಯತೆ ಸಿಗುವುದರಿಂದಕನ್ನಡ ಸಿನಿಮಾಗಳಿಗೆ ಇದುಸ್ಪರ್ಧೆಯೊಡ್ಡಲಿದೆ.ಉಳಿದಂತೆಇದೇ ತಿಂಗಳು ರಿಲೀಸ್ ಆಗಿರುವದರ್ಶನ್ ನಟನೆಯ ‘ದ ಡೆವಿಲ್’,ಹಿಂದಿಯ‘ಧುರಂಧರ್’ ಮತ್ತು ಹಾಲಿವುಡ್‘ಅವತಾರ್ 3:´ಫೈರ್ಆ್ಯಂಡ್ ಆ್ಯಶ್’ ಚಿತ್ರಗಳಿಗೆಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು,ಥಿಯೇಟರ್ಮತ್ತು ಮಲ್ಟಿಪ್ಲೆಕ್ಸ್ ಸಮಸ್ಯೆಎದುರಾಗುವ ಸಾಧ್ಯತೆ ಇದೆ.

ಪರಭಾಷೆಯಸಿನಿಮಾಗಳಿವೆ:

ವರ್ಷಾಂತ್ಯದಕ್ರಿಸ್‌ಮಸ್ ರಜೆ ಹಾಗೂ ಹೊಸ ವರ್ಷದರಜೆಗಳನ್ನು ಸದುಪಯೋಗಪಡಿಸಿಕೊಳ್ಳಲುತೆಲುಗು,ಹಿಂದಿ,ತಮಿಳಿನಲ್ಲೂಹಲವು ಚಿತ್ರಗಳು ರಿಲೀಸ್ ಆಗುತ್ತಿವೆ.ಕಾರ್ತಿಕ್ಆರ್ಯನ್,ಅನನ್ಯಾಪಾಂಡೆ ನಟಿಸಿರುವ ಹಿಂದಿಯ ‘ತುಮೇರಿ ಮೇ ತೇರಾ ಮೇ ತೇರಾ ತು ಮೇರಿ’,ತೆಲುಗಿನಲ್ಲಿಸಾಯಿ ಕುಮಾರ್ ಪುತ್ರ ಆದಿ ನಟನೆಯ‘ಶಂಬಾಲಾ’,ಸುಧಿಸುಡಿಗಾಳಿಯ ‘ಗೋಟ್’,ರೋಷನ್ಮೇಕಾ ನಟಿಸಿರುವ ‘ಚಾಂಪಿಯನ್’ಮತ್ತು ತಮಿಳಿನಲ್ಲಿ ಅರುಣ್ ವಿಜಯ್ಅಭಿನಯದ ಆ್ಯಕ್ಷನ್-ಥ್ರಿಲ್ಲರ್‘ರೆಟ್ಟಾ ತಲಾ’,ಮಲಯಾಳಂನಕಾಮಿಡಿ,್ಯಾಂಟಸಿಚಿತ್ರ ‘ಸರ್ವಂ ಮಯ’ ಕೂಡ ರಿಲೀಸ್ಆಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net