

ಬೆಳಗಾವಿ: ಮಹಿಳಾ ಸಂಘದ ಸದಸ್ಯರ ಹೆಸರಿನಲ್ಲಿಯೇ ಖಾಸಗಿ ಸೊಸೈಟಿಗಳಲ್ಲಿ ಕೋಟ್ಯಂತರ ರೂ. ಸಾಲ ಪಡೆದ ಮಹಿಳೆಯೊಬ್ಬಳು ಅಂದಾಜು 30 ಸಾವಿರ ಮಹಿಳೆಯರಿಗೆ ವಂಚನೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ತಾಲೂಕಿನ ಹಾಲಬಾವಿ ಗ್ರಾಮದ ಯಲ್ಲವ್ವ ಬನ್ನಿಬಾಗಿ(41) ಆರೋಪಿತ ಮಹಿಳೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿನ ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಸಂಘಗಳನ್ನು ರಚನೆ ಮಾಡಿದ್ದಾಳೆ. ಆ ಸಂಘಗಳಲ್ಲಿರುವ ಅಂದಾಜು 30 ಸಾವಿರ ಮಹಿಳೆಯರ ಹೆಸರಿನಲ್ಲಿ ಖಾಸಗಿ ಸೊಸೈಟಿಗಳಲ್ಲಿ, ಫೈನಾನ್ಸ್ಗಳಲ್ಲಿ ತಲಾ 50 ಸಾವಿರ ರೂ. ಸಾಲ ತೆಗೆಸಿದ್ದಾಳೆ. ಅದರಲ್ಲಿ 25 ಸಾವಿರ ರೂ. ಅವರಿಗೆ ನೀಡಿ ಇನ್ನುಳಿದ 25 ಸಾವಿರ ರೂ. ತನ್ನಲ್ಲೇ ಇಟ್ಟುಕೊಂಡಿದ್ದಾಳೆ. ಅಲ್ಲದೆ, ನಿಮ್ಮ ಎಲ್ಲ ಸಾಲವನ್ನು ನಾನೇ ಪಾವತಿಸುತ್ತೇನೆ ಎಂದು ವಂಚಿಸಿದ್ದಾಳೆ ಎಂದು ಮಹಿಳೆಯರು ದೂರಿದ್ದಾರೆ. ಆದರೆ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ಮಹಿಳೆಯರಿಂದ ಪ್ರತಿಭಟನೆ: ಮಹಿಳಾ ಸಂಘದ ಸದಸ್ಯರ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿರುವ ಸುರೇಖಾ ವೈಯಕ್ತಿಕ ಆಸ್ತಿ ಮಾಡುವುದರ ಜತೆಗೆ ಐಷಾರಾಮಿ ಜೀವನ ನಡೆಸುತ್ತಿದ್ದಾಳೆ. ಆದರೆ, ಸೊಸೈಟಿಗಳಲ್ಲಿ ಪಡೆದುಕೊಂಡಿರುವ ಸಾಲವನ್ನು ಮರು ಪಾವತಿಸಲು ನಿರಾಕರಿಸಿರುವ ಹಿನ್ನೆಲೆ ಸೋಮವಾರ ವಿವಿಧ ಗ್ರಾಮಗಳ ಮಹಿಳಾ ಸಂಘದ ಸದಸ್ಯರು ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಲ್ಲದೆ, ಸೊಸೈಟಿಗಳಲ್ಲಿರುವ ಎಲ್ಲ ಸಾಲವನ್ನು ನೀನೇ ತೀರಿಸಬೇಕು ಎಂದು ಮಹಿಳೆಯರು ಪಟ್ಟು ಹಿಡಿದ್ದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ಮಧ್ಯಪ್ರವೇಶಿಸಿದ ಕಾಕತಿ ಠಾಣೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಹಾಲಬಾವಿ ಗ್ರಾಮದ ಯಲ್ಲವ್ವ ಬನ್ನಿಬಾಗಿ ಸಾವಿರಾರು ಮಹಿಳೆಯರಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. | ರೋಹನ ಜಗದೀಶ ಡಿಸಿಪಿ https://www.vijayavani.net/post-office-invest-rs-50-and-get-35-lakh-after-maturity