ಸ್ಮಾರ್ಟ್‌ಸಿಟಿಯಲ್ಲಿದೆ ಮೃತ್ಯುಕೂಪ ಮ್ಯಾನ್‌ಹೋಲ್‌ಗಳು!

ಕರಂಗಲಪಾಡಿ ಬಳಿ ರಸ್ತೆ ಅಗೆದು ಮ್ಯಾನ್‌ಹೋಲ್ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಕರಂಗಲಪಾಡಿ ಬಳಿ ರಸ್ತೆ ಅಗೆದು ಮ್ಯಾನ್‌ಹೋಲ್ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
Published on
ಮಂಗಳೂರು: ಕರಾವಳಿಯ ಹೆಮ್ಮೆಯ ಸ್ಮಾರ್ಟ್‌ಸಿಟಿ ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮುನ್ನ ಎಚ್ಚರ! ನಗರದ ಶೇ. 50ಕ್ಕೂ ಹೆಚ್ಚು ಒಳಚರಂಡಿ ಮ್ಯಾನ್‌ಹೋಲ್‌ಗಳು ಸದ್ಯ ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ಮೃತ್ಯುಕೂಪಗಳಾಗಿ ಬದಲಾಗಿವೆ. ರಸ್ತೆಗಿಂತ ಕೆಳಕ್ಕೆ ಕುಸಿದಿರುವ ಈ ಮ್ಯಾನ್‌ಹೋಲ್‌ಗಳ ಮುಚ್ಚಳ ಒಡೆದು, ಕಬ್ಬಿಣದ ರಾಡ್ ಹಾಗೂ ಸಲಾಖೆಗಳು ಹೊರಬಂದಿದ್ದು, ವಾಹನಗಳ ಟಯರ್‌ಗಳನ್ನು ಸೀಳುತ್ತಿವೆ.
ಬಂಟ್ಸ್‌ಹಾಸ್ಟೇಲ್-ಪಿವಿಎಸ್ ಮಧ್ಯದ ಕರಂಗಲಪಾಡಿ ಬಳಿ ರಸ್ತೆ ಅಗೆದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ನಿತ್ಯ ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಬಂಟ್ಸ್‌ಹಾಸ್ಟೇಲ್ ಜಂಕ್ಷನ್, ಜ್ಯೋತಿ, ವಿಟಿ ರಸ್ತೆ, ಬೆಂದೂರ್‌ವೆಲ್ ಹಾಗೂ ಕಂಕನಾಡಿ ರಸ್ತೆಗಳೂ ಇದಕ್ಕೆ ಹೊರತಾಗಿಲ್ಲ.
*ದಂಧೆಯಾದ ದುರಸ್ತಿ ಕಾರ್ಯ:
ಸುಸಜ್ಜಿತ ರಸ್ತೆ ನಿರ್ಮಿಸಿದ ತಕ್ಷಣವೇ ಅದನ್ನು ಕತ್ತರಿಸಿ ಮ್ಯಾನ್‌ಹೋಲ್ ಕಟ್ಟುವುದು ಇಲ್ಲಿನ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿಯಮಿತ ರೂಢಿಯಾಗಿದೆ. ಮ್ಯಾನ್‌ಹೋಲ್ ದುರಸ್ತಿ ನೆಪದಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಕೊಳ್ಳೆಹೊಡೆಯುವ ದೊಡ್ಡ ದಂಧೆಯೇ ಇಲ್ಲಿ ನಡೆಯುತ್ತಿದೆ ಎಂಬ ಸಾರ್ವಜನಿಕರ ಆಕ್ರೋಶ ತುತ್ತತುದಿಗೆ ತಲುಪಿದೆ.
------------
ಮ್ಯಾನ್‌ಹೋಲ್‌ಗಳೇ ಆದಾಯದ ಮೂಲ
ಮುಚ್ಚಳಗಳು ಸವೆದು, ಒಳಗಿನ ಕಬ್ಬಿಣದ ಕಂಬಿ ಹಾಗೂ ರಾಡ್‌ಗಳು ಹೊರಬಂದು ವಾಹನಗಳ ಟಯರ್‌ಗಳನ್ನು ಸೀಳುತ್ತಿವೆ. ಇನ್ನು ಹಲವೆಡೆ ಮ್ಯಾನ್‌ಹೋಲ್‌ಗಳು ನೆಲಕ್ಕೇ ಕುಸಿದು ಭಾರಿ ಗುಂಡಿಗಳಾಗಿ ಮಾರ್ಪಟ್ಟಿವೆ. ಕರಂಗಲಪಾಡಿ ಬಳಿ ರಸ್ತೆ ಅಗೆದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಬಂಟ್ಸ್‌ಹಾಸ್ಟೇಲ್, ಜ್ಯೋತಿ, ಬೆಂದೂರ್‌ವೆಲ್, ಕಂಕನಾಡಿ ಹಾಗೂ ಬಲ್ಮಠದ ಪ್ರಮುಖ ರಸ್ತೆಗಳ ಕಥೆಯೂ ಇದೇ ಆಗಿದೆ. ದೇರೆಬೈಲ್, ಆನೆಗುಂಡಿ ಬಳಿಯ ಮ್ಯಾನ್‌ಹೋಲ್ ಸ್ಥಿತಿ ಚಿಂತಾಜನಕವಾಗಿದೆ. ಅಚ್ಚರಿಯ ವಿಷಯವೆಂದರೆ, ಪಾಲಿಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಈ ಮ್ಯಾನ್‌ಹೋಲ್‌ಗಳೇ ಆದಾಯದ ಮೂಲವಾಗಿ ಮಾರ್ಪಟ್ಟಿವೆ! ಸುಸಜ್ಜಿತ ರಸ್ತೆ ನಿರ್ಮಿಸಿದ ಬೆನ್ನಲ್ಲೇ, ಅದನ್ನು ಕತ್ತರಿಸಿ ಮ್ಯಾನ್‌ಹೋಲ್ ಮಾಡುವುದು ಇಲ್ಲಿನ ಪದ್ಧತಿ. ದುರಸ್ತಿ ನೆಪದಲ್ಲಿ ಲಕ್ಷಾಂತರ ರೂಪಾಯಿ ಸಾರ್ವಜನಿಕ ಹಣವನ್ನು ಲೂಟಿ ಹೊಡೆಯುವ ದೊಡ್ಡ ದಂಧೆಯೇ ಇಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಸಾರ್ವಜನಿಕರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದ್ದು, ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net