

ಬೆಂಗಳೂರು: ನಿತ್ಯ 5 ಸಾವಿರಕ್ಕೂ ಅಧಿಕ ಹೊಸ ಕರೊನಾ ಕೇಸ್ಗಳು ಪತ್ತೆಯಾಗುವುದು ರಾಜ್ಯದಲ್ಲಿ ಇಂದೂ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ (ಶುಕ್ರವಾರ ಸಂಜೆ 5ರಿಂದ ಶನಿವಾರ ಸಂಜೆ 5 ಗಂಟೆವರೆಗೆ) 5,172 ಜನರು ಸೋಂಕಿಗೆ ಒಳಗಾಗಿದ್ದಾರೆ. ಒಟ್ಟು ಕೋವಿಡ್ ರೋಗಿಗಳ ಸಂಖ್ಯೆ ಈಗ 1,29,287ಕ್ಕೆ ಏರಿದಂತಾಗಿದೆ.
ರಾಜ್ಯದಲ್ಲಿ ಸಾವಿನ ಸಂಖ್ಯೆ ಶತಕ ಸಮೀಪಿಸಿದೆ. 98 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 2,412 ಆಗಿದೆ. ಇದಲ್ಲದೇ, ಒಟ್ಟಾರೆಯಾಗಿ ಕೋವಿಡ್ನಿಂದ ಗಂಭೀರವಾಗಿರುವವ ಸಂಖ್ಯೆ 609ಕ್ಕೆ ಏರಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಂಚ ಸಮಾಧಾನದ ಸಂಗತಿ ಎಂದರೆ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ನಿನ್ನೆ 3,130 ಜನರು ಚೇತರಿಸಿಕೊಂಡಿದ್ದರೆ, ಇಂದು 3,860 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 73,219 ಆಗಿದೆ.
ಬೆಂಗಳೂರಿನಲ್ಲಿ ನಿನ್ನೆಗೆ ಹೋಲಿಸಿದಲ್ಲಿ ಹೊಸ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ನಿನ್ನೆ 2,220 ಆಗಿದ್ದ ಹೊಸ ಪ್ರಕರಣಗಳು ಇಂದು 1,852ಕ್ಕೆ ಇಳಿಕೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 57,396 ಆಗಿದ್ದರೆ, ಈ ಪೈಕಿ ಸಕ್ರಿಯ ಪ್ರಕರಣಗಳು 37,760.
ರಾಜಧಾನಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿ 1,683ಕ್ಕೆ ಏರಿದೆ. ನಿನ್ನೆ 1,113 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇಂದು ಕೋವಿಡ್ಗೆ 27 ಜನರು ಬಲಿಯಾಗಿ ಒಟ್ಟಾರೆ ಸಾವಿನ ಸಂಖ್ಯೆ 1,056ಕ್ಕೆ ಏರಿಕೆಯಾಗಿದೆ.
ರಾಜ್ಯಾದ್ಯಂತ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರು ಸೇರಿ ಒಟ್ಟಾರೆ 2,05,706 ಜನರು ಕ್ವಾರಂಟೈನ್ನಲ್ಲಿ ಇದ್ದಾರೆ. ಇಂದು ಒಟ್ಟು 34,760 ಜನರಿಗೆ ಕರೊನಾ ತಪಾಸಣೆ ಮಾಡಲಾಗಿದೆ.
ಜಿಲ್ಲಾವಾರು ಕೋವಿಡ್ ಅಂಕಿ-ಅಂಶ