ಎಮ್ಮೆಗಳ ರಕ್ಷಣೆಗೆ ಹೋದ ನವವಿವಾಹಿತ ಜಲಸಮಾಧಿ!

death -flood
Published on

ಹಾವೇರಿ: ನಡುಗಡ್ಡೆಯಲ್ಲಿ ಸಿಲುಕಿದ್ದ ಎಮ್ಮೆಗಳ ರಕ್ಷಣೆಗೆಂದು ವರದಾ ನದಿ ನೀರಿಗೆ ಇಳಿದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ನವವಿವಾಹಿತನ ಶವ ಇಂದು(ಸೋಮವಾರ) ಪತ್ತೆಯಾಗಿದೆ.

ರಾಜ್ಯದಲ್ಲಿ ರಣಭೀಕರ ಮಳೆ ತಂದೊಡ್ಡುತ್ತಿರುವ ಸಾವು-ನೋವಿನ ಪ್ರಮಾಣ ದಿನೇದಿನೆ ಹೆಚ್ಚುತ್ತಲೇ ಇದೆ. ವರದಾ‌ ನದಿಯು ಅಪಾಯದ ಮಟ್ಟ ತುಂಬಿ ಹರಿಯುತ್ತಿದ್ದು, ಪ್ರವಾಹ ಉಂಟಾಗಿದೆ. ಎರಡು ದಿನದ ಹಿಂದೆ ಅಂದರೆ ಆ.8ರಂದು ಹಾನಗಲ್ ತಾಲೂಕಿನ ಇನಾಂಲಕಮಾಪುರ ಗ್ರಾಮದ ಯುವಕ ಚಂದ್ರಶೇಖರ್ ದಳವಾಯಿ ಅವರ ಎಮ್ಮೆಗಳು ಗ್ರಾಮದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದವು. ಅವುಗಳ ರಕ್ಷಣೆಗೆ ಅಂದು ಸಂಜೆ ನೀರಿಗೆ ಇಳಿದ್ದಿದ್ದ ಯುವಕ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ.

ವರದಾ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಚಂದ್ರಶೇಖರ್​ ದಳವಾಯಿಯ ಶವ ಹಾನಗಲ್ ತಾಲೂಕಿನ ಸೋಮಾಪುರ ಗ್ರಾಮದ ನದಿ ದಡದಲ್ಲಿ ಪತ್ತೆಯಾಗಿದೆ. ಮೃತನಿಗೆ ಮೂರು ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net