ಸಹಕಾರ ಸಂಘಗಳಲ್ಲಿಯೇ ವ್ಯವಹರಿಸಿ

19ant1ep.
ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್‌ನ ಆನವಟ್ಟಿ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಬಿ.ವೈ ರಾಘವೇಂದ್ರ, ವೇದಮೂರ್ತಿ, ಕೆ.ಪಿ.ರುದ್ರಗೌಡ, ಎ.ಎಲ್.ಅರವಿಂದ್, ಮಹಾಗಣಪತಿ ಇತರರಿದ್ದರು.
Published on

ಆನವಟ್ಟಿ: ರಾಜ್ಯದಲ್ಲಿ ಹೊರ ರಾಜ್ಯಗಳ ಬ್ಯಾಂಕ್ ಶಾಖೆಗಳು ತಲೆ ಎತ್ತುವ ಮೂಲಕ ಅಭಿವೃದ್ಧಿ ಹೊಂದುತ್ತಿವೆ. ಜತೆಗೆ ಅಲ್ಲಿನ ರಾಜ್ಯದ ಜನರಿಗೆ ಉದ್ಯೋಗ ಅವಕಾಶಗಳು ಸಿಗುತ್ತಿವೆ. ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು ಎಂದು ಹಿರೇಮಾಗಡಿ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಆನವಟ್ಟಿಯಲ್ಲಿ ಶಿರಾಳಕೊಪ್ಪದ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ನೂತನ ಶಾಖೆ ಆರಂಭೋತ್ಸವ ಸಮಾರಂಭದಲ್ಲಿ ಮಾತನಾಡಿ, ತಿಂಗಳಿಗೆ ಶೇ.5-10ರ ಬಡ್ಡಿ ಸಾಲ ಮಾಡಿರುವ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಶೇ.1ರ ದರಕ್ಕಿಂತಲ್ಲೂ ಕಡಿಮೆ ಬಡ್ಡಿಗೆ ಸಾಲ ದೊರೆಯುವ ಬಸವೇಶ್ವರ ಸಹಕಾರ ಬ್ಯಾಂಕ್‌ನಲ್ಲಿ ವ್ಯವಹರಿಸಿ ಆರ್ಥಿಕ ನಷ್ಟದಿಂದ ದೂರವಿರಬೇಕು ಎಂದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ವಾರ್ಥವಿಲ್ಲದೆ ಜನರ ಸೇವೆ ಮಾಡುವ ಸಹಕಾರ ಬ್ಯಾಂಕ್ ಯಶಸ್ವಿಯಾಗಿ ಮುನ್ನಡೆಯುತ್ತದೆ. ಸ್ವತಂತ್ರಪೂರ್ವದಲ್ಲಿ ಸ್ಥಾಪಿತವಾದ ಸಹಕಾರ ಬ್ಯಾಂಕ್ 115 ವರ್ಷ ಪೂರೈಸಿದೆ. 150 ಕೋಟಿ ರೂ. ವ್ಯವಹಾರ ನಡೆಸುತ್ತಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ, ಜಿಪಂ ಮಾಜಿ ಸದಸ್ಯ ಎ.ಎಲ್.ಅರವಿಂದ್, ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ವೇದಮೂರ್ತಿ, ಉಪಾಧ್ಯಕ್ಷ ಮಹಾಗಣಪತಿ, ನಿರ್ದೇಶಕರಾದ ಎಚ್.ಎಂ.ಗಂಗಮ್ಮ, ನಿವೇದಿತಾ ರಾಜು, ಎನ್.ಆನಂದಪ್ಪ, ಎನ್.ಷಣ್ಮುಖಪ್ಪ, ರಾಜೇಶ್ ಕೃಷ್ಣಮೂರ್ತಿ, ಎನ್.ಚಂದ್ರಮೌಳೇಶ್ವರ, ಎಸ್.ಮುರುಘರಾಜ್, ಸೂರಣಗಿ ನಟರಾಜ್, ಕೆ.ವಿ.ನರೇಂದ್ರ, ಇಸಳೂರು ಉಮೇಶ್, ಬಿ.ಪ್ರಭುಲಿಂಗಪ್ಪ, ಬಿ.ವಿ.ಶೇಷಗಿರಿ, ವಿ.ಸಿ.ಅಶೋಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಮಹಾದೇವಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net