

ಮಂಗಳೂರು: ನಗರದ ಹೊರವಲಯದ ಮಲಾರ್ ನಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ಶವವಾಗಿ ಪತ್ತೆಯಾಗಿದ್ದಾರೆ. ಅವರ ಮೃತದೇಹ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಲಾರ್ ನಿವಾಸಿ ಪಲ್ಲಿಯಾಕ ಯಾನೆ ಮೋನು (70) ಮೃತರು. ಶುಕ್ರವಾರ ಬೆಳಗ್ಗೆಯಿಂದಲೂ ನಾಪತ್ತೆಯಾಗಿದ್ದ ಇವರ ಮೊಬೈಲ್ ಮಧ್ಯಾಹ್ನದವರೆಗೆ ರೀಚೆಬಲ್ ಇತ್ತು. ಆದರೆ ನಂತರ ಸ್ವಿಚ್ ಆಫ್ ಆಗಿದೆ. ನಂತರ ಸಂಬಂಧಿಕರೂ ಹುಡುಕಾಟ ನಡೆಸಿದ್ದಾರೆ. ನಂತರ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು.
ಭಾನುವಾರ ಬೆಳಗ್ಗೆ ಇರಾ ಬಳಿಯ ಗುಡ್ಡದಲ್ಲಿ ಅವರ ಶವ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರನ್ನು ಅಪಹರಿಸಿ ಕೊಲೆ ಮಾಡಿ ಮಣ್ಣಿನಡಿ ಹೂತಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.