

ನವದೆಹಲಿ: ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದ ಹೋಟೆಲ್ ಮುಂಭಾಗದಲ್ಲಿ ಸೋಮವಾರ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ 4.30ಕ್ಕೆ ಸಿಕ್ಕ ಮಾಹಿತಿಯಾಧಾರದ ಮೇಲೆ ಸ್ಥಳಕ್ಕೆ ಹೋದ ಪೊಲೀಸರು 25-30 ವರ್ಷದೊಳಗಿನ ಮಹಿಳೆಯ ಅಪರಿಚಿತ ಶವವನ್ನು ವಶಪಡಿಸಿಕೊಂಡಿದ್ದಾರೆ. ಶವವನ್ನು ಪೆಟ್ಟಿಗೆಯೊಳಗಿಟ್ಟು ಗೋಣಿಚೀಲದಿಂದ ಮುಚ್ಚಲಾಗಿತ್ತು. ಕುತ್ತಿಗೆಗೆ ನೀಲಿ ಬಣ್ಣದ ಸ್ಕಾರ್ಫ್ ಕೂಡ ಸುತ್ತಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆ ಸ್ಥಳದ ಪರಿಶೀಲನೆ ನಡೆಸಿದ ನಂತರ ಶವವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ, ಈ ಕುರಿತು ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವೇದ ಪ್ರಕಾಶ್ ಸೂರ್ಯ ತಿಳಿಸಿದ್ದಾರೆ.