ಬದುಕಿರುವ ಮಗನ ಹೆಸರು ಮಿಸ್ಸಿಂಗ್; ಮೃತ ತಂದೆ ಹೆಸರು ವೋಟರ್ ಲಿಸ್ಟ್​ನಲ್ಲಿ ಪತ್ತೆ!

election scam
Published on

ಬೆಂಗಳೂರು: ಇಲ್ಲಿ ವಿಚಿತ್ರ ಪ್ರಕರಣವೊಂದು ಪತ್ತೆಯಾಗಿದ್ದು ಹತ್ತು ವರ್ಷದ ಹಿಂದೆ ಮೃತರಾಗಿರುವ ತಂದೆಯ ಹೆಸರು ವೋಟರ್ ಲಿಸ್ಟ್​ನಲ್ಲಿ ಪತ್ತೆಯಾಗಿದ್ದು ಮತ ಚಲಾಯಿಸಲು ಬಂದ ಮಗನ ಹೆಸರೇ ಅದರಲ್ಲಿ ಇರಲಿಲ್ಲ!

ಈ ಘಟನೆ ಜಯನಗರದ ಮತಗಟ್ಟೆಯಲ್ಲಿ ನಡೆದಿದ್ದು ಇದರಿಂದಾಗಿ ನೊಂದ ಪುತ್ರ ಮತದಾನ ಮಾಡದೇ ತೆರಳಿದ್ದಾರೆ. ಮತ ಹಾಕಲು ಬಂದ ಪುತ್ರ, ಬದುಕಿರುವವರ ಹೆಸ್ರು ಡಿಲೀಟ್ ಆಗುತ್ತೆ, ಸತ್ತವರ ಹೆಸ್ರು ಇರುತ್ತೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತದಾರರ ಹೆಸರು ಸೌಮಿತ್ರ ಎಂದಾಗಿದ್ದು ಇವರ ತಂದೆ ಕೃಷ್ಣ ಮೂರ್ತಿ ಹತ್ತು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net