43 ಚಾಲಕರ ವಿರುದ್ಧ ಡಿಡಿ ಕೇಸ್

traffic_police_driving_licence-amp
Published on

ಬೆಂಗಳೂರು: ನಗರ ಸಂಚಾರ ಪೊಲೀಸರು ಶನಿವಾರ ರಾತ್ರಿ ನಗರದ ವಿವಿಧೆಡೆ ನಡೆಸಿದ ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧದ ವಿಶೇಷ ಕಾರ್ಯಾಚರಣೆ ವೇಳೆ ಮದ್ಯ ಸೇವಿಸಿ ವಾಹನ ಚಲಾಯಿಸಿದ 43 ಚಾಲಕರು ಸೆರೆಸಿಕ್ಕಿದ್ದಾರೆ.

ಮೆಜೆಸ್ಟಿಕ್, ಆನಂದರಾವ್ ವೃತ್ತ, ಮೌರ್ಯ ಸರ್ಕಲ್, ಯಶವಂತಪುರ, ಶಾಂತಿನಗರ, ಕೆ.ಆರ್.ಪುರ ಸೇರಿದಂತೆ ನಗರದ ವಿವಿಧೆಡೆ ಸಂಚಾರ ಪೊಲೀಸರು 3,804 ವಿವಿಧ ವಾಹನಗಳ ಚಾಲಕರನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಈ ಪೈಕಿ ದ್ವಿಚಕ್ರ ವಾಹನ 14, ಕಾರು/ಕ್ಯಾಬ್ 13, ಆಟೋರಿಕ್ಷಾ 4 ಮತ್ತು 12 ಖಾಸಗಿ ಬಸ್ ಚಾಲಕರು ಸೇರಿದಂತೆ 43 ವಾಹನಗಳ ಚಾಲಕರು ಮದ್ಯ ಸೇವನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧದ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net