

ಬೆಂಗಳೂರು: ಡಿಸಿಎಂ ಪದ ವ್ಯಾಲ್ಯೂ ಕಳೆದುಕೊಂಡಿದೆ. ಆಂಧ್ರ ಪ್ರದೇಶದಲ್ಲಿ ಐದೈದು ಡಿಸಿಎಂ ಮಾಡಿದ್ದರು. ಸಿಎಂ ಇಲ್ಲದಾಗ ಕೆಲಸ ಮಾಡೋಕೆ ಒಬ್ಬರು ಇರಬೇಕು. ಮೂರು ಮಾಡಲಿ ಎಂದಿದ್ದಕ್ಕೆ ನಾನು ಆರು ಮಾಡಿ ಎಂದು ವ್ಯಂಗವಾಡಿದ್ದಾಗಿ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ನಾನು ಆರು ಮಂದಿ ಡಿಸಿಎಂ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಕೆಲವರು ಮೂರು ಕೇಳಿದ್ದಕ್ಕೆ ನಾನು ಆರು ಮಾಡಲಿ ಎಂದೆ ಅಷ್ಟೆ ಎಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಉಪಮುಖ್ಯಮಂತ್ರಿ ಹುದ್ದೆ ಸಂವಿಧಾನದಲ್ಲಿ ಇಲ್ಲ. ಅದೊಂದು ಗೌರವದ ಹುದ್ದೆ. ಮತ್ತೆ ಮೂರು ಉಪಮುಖ್ಯಮಂತ್ರಿ ಮಾಡಬೇಕೆಂಬ ವಿಚಾರ ಬಂದಾಗ ಮೂರು ಏಕೆ ಆರು ಮಾಡಿ ಎಂದು ಹೇಳಿದ್ದು ನಿಜ. ಉಪಮುಖ್ಯಮಂತ್ರಿಗಳ ಸಂಖ್ಯೆ ಹೆಚ್ಚಾದಾಗ ಪ್ರಧಾನ ಉಪಮುಖ್ಯಮಂತ್ರಿಯನ್ನು ಮಾಡಬೇಕೆ? ಎಂದು ರಾಯರೆಡ್ಡಿ ಪ್ರಶ್ನಿಸಿದರು.