ಡಿಸಿಇಟಿ: ಜು.2ರಿಂದ 4ರವರೆಗೆ ದಾಖಲಾತಿ ಪರಿಶೀಲನೆ

Exam
Published on

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಎನ್ ಸಿಸಿ, ಸೈನಿಕ, ಮಾಜಿ ಸೈನಿಕ, ಸ್ಕೌಟ್ಸ್ ಆಂಡ್ ಗೈಡ್ಸ್, ಆಂಗ್ಲೊ ಇಂಡಿಯನ್ ಇತ್ಯಾದಿ ವಿಶೇಷ ವರ್ಗಗಳಡಿ ಕ್ಲೇಮ್ ಮಾಡಿದ್ದ ಅಭ್ಯರ್ಥಿಗಳ ಪ್ರಮಾಣ ಪತ್ರಗಳನ್ನು ಪರಿಶೀಲನೆ ಮಾಡಿದ್ದು, ಅರ್ಹ/ ಅನರ್ಹರ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರ ಪ್ರಕಟಿಸಿದೆ.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಹಾಗೂ ಎಡಿಟಿಂಗ್​ಗೆ ಅವಕಾಶ ನೀಡಿದ್ದ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿದ್ದರು. ಆ ಎಲ್ಲ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ಮಾಡಿ, ಯಾರೆಲ್ಲ ಕ್ಲೇಮ್ಗೆ ಅರ್ಹರಿದ್ದಾರೆ? ಯಾರಿಲ್ಲ ಎಂಬುದರ ಪಟ್ಟಿಯನ್ನು ನೀಡಿದ್ದು, ಅದನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕ್ರೀಡಾ ಕೋಟಾದ ಅರ್ಹ/ಅನರ್ಹರ ಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net