

ಕೋಲಾರ: ಡಿಸಿಸಿ ಬ್ಯಾಂಕಿನಲ್ಲಿ ನಡೆದಿರುವ ಭ್ರಷ್ಟಚಾರದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಹಾಗೂ ಆಡಳಿತ ಮಂಡಳಿಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಎದುರು ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು, ತಲೆ ಮೇಲೆ ಇಟ್ಟಿಗೆ ಹೊತ್ತು ವಿನೂತನ ರೀತಿ ಪ್ರತಿಭಟನೆ ನಡೆಸಿ, ಮಹಿಳಾ ಸಂಘಗಳಿಗೆ ಹಾಗೂ ರೈತರಿಗೆ ಸಾಲ ವಿತರಣೆಗೆ ಪಟ್ಟು ಹಿಡಿದರು.
ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಬ್ಯಾಂಕಿನಿಂದ ಸಾಲ ವಿತರಣೆ ಮಾಡುವುದನ್ನು ನಿಲ್ಲಿಸಿರುವುದರಿಂದ ಗ್ರಾಮೀಣ ಭಾಗದಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಗಳು ತಲೆ ಎತ್ತಿದ್ದು, ಸಾಲ ನೀಡಿ ಅಽಕ ಬಡ್ಡಿ ವಸೂಲಿ ಮಾಡಿ ಹಣ ಸುಲಿಗೆ ಮಾಡುತ್ತಿದ್ದಾರೆ. ಈ ಕಿರುಕುಳದಿಂದ ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಹೈಕೋರ್ಟ್ ಕೋಲಾರ-ಚಿಕ್ಕಬಳ್ಳಾಪುರ ಸಹಕಾರ ಬ್ಯಾಂಕ್‌ಗೆ ಚುನಾವಣೆ ನಡೆಸಿ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಜಿಲ್ಲಾಽಕಾರಿಗಳಿಗೆ ಸೂಚನೆ ನೀಡಿದ್ದರೂ ವಿಳಂಬ ಮಾಡಲಾಗುತ್ತಿದೆ. ಸರ್ಕಾರವು ಉದ್ದೇಶ ಪೂರ್ವಕವಾಗಿಯೇ ಚುನಾವಣೆ ಮುಂದೂಡುತ್ತಿರುವುದು ಸರಿಯಲ್ಲ ಎಂದರು.
ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಆಡಳಿತ ಅವಧಿ ಮುಗಿದ ನಂತರ ಬ್ಯಾಂಕಿನಲ್ಲಿ ವ್ಯವಸ್ಥಾಪಕ ನಿರ್ದೇಶಕರಿಗೆ, ಅಽಕಾರಿಗಳಿಗೆ ಹಣಕಾಸು ವಿಚಾರದಲ್ಲಿ ಗಂಭೀರತೆ ಇಲ್ಲದಂತಾಗಿದೆ. ಅವರೆಲ್ಲ ಸಂಬಳಕ್ಕೆ ಸೀಮಿತವಾಗಿದ್ದಾರೆ. ಸುಮಾರು ವರ್ಷಗಳಿಂದ ಟಿಕಾಣಿ ಹೂಡಿರುವ ಅಽಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕೆಲ ರಾಜಕೀಯ ಪಟ್ಟಭದ್ರ ಶಕ್ತಿಗಳು ಬ್ಯಾಂಕಿನ ವಿಚಾರದಲ್ಲಿ ಮೂಗು ತೂರಿಸುತ್ತಿವೆ. ಒಂದು ಕಾಲದಲ್ಲಿ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಂಡು ರಾಜಕೀಯ ಮುಖಂಡರೆ ಬ್ಯಾಂಕ್ ವಿಚಾರದಲ್ಲಿ ಮುಳುವಾಗಿದ್ದಾರೆ, ಸರ್ಕಾರಕ್ಕೂ ರೈತರ ಹಿತಕ್ಕಿಂತ ರಾಜಕೀಯ ಮುಖಂಡರ ಹಿತವೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಜಿಎಂ ಶಿವಕುಮಾರ್, ಹಗರಣದ ವಿಚಾರವಾಗಿ ತನಿಖೆ ನಡೆಯುತ್ತಿದೆ. ಲೆಕ್ಕ ಪರಿಶೋಧಕರಿಗೂ ಪತ್ರ ಬರೆಯಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ತಿಂಗಳ ಅಂತ್ಯದಲ್ಲಿ ಸಾಲ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆರ್ಥಿಕ ಶಕ್ತಿಯಾಗಿದ್ದ ಬ್ಯಾಂಕ್
ನಷ್ಟದಲ್ಲಿದ್ದ ಬ್ಯಾಂಕನ್ನು ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿಯು ಸುಧಾರಣೆ ಮಾಡಿ ರೈತರಿಗೆ, ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಆರ್ಥಿಕ ಶಕ್ತಿ ತುಂಬಿತು ಎಂದು ನಳಿನಿಗೌಡ ಸ್ಮರಿಸಿದರು. 10 ವರ್ಷಗಳ ಕಾಲ ಲಾಭದಲ್ಲಿದ್ದಂತಹ ಬ್ಯಾಂಕ್ ಈಗ 10 ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿರುವ ಹಿಂದಿನ ರಹಸ್ಯವೇನು? ಬ್ಯಾಂಕ್ ವ್ಯವಸ್ಥಾಪಕರು, ಸೂಪರ್‌ವೈಸರ್ ನಕಲಿ ಸಂಘಗಳನ್ನು ಸೃಷ್ಟಿ ಮಾಡಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಯೇ?, ಸರ್ಕಾರದ ತನಿಖಾ ವರದಿಯಲ್ಲಿ 1 ಕೋಟಿ 50 ಲಕ್ಷ ರೂ. ದುರುಪಯೋಗವಾಗಿರುವುದು ಸಾಬೀತಾಗಿದ್ದರೂ ಭ್ರಷ್ಟ ಅಽಕಾರಿಗಳ ರಕ್ಷಣೆಗೆ ನಿಂತಿರುವವರು ಯಾರು ಎಂದು ಪ್ರಶ್ನಿಸಿದರು.
ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮುಖಂಡ ಮರಗಲ್ ಶ್ರೀನಿವಾಸ್, ಪದಾಽಕಾರಿಗಳಾದ ನರಸಿಂಹಯ್ಯ, ಕುವ್ವಣ್ಣ, ಅಶ್ವತ್ಥಪ್ಪ, ಯಲ್ಲಪ್ಪ, ಹರೀಶ್, ಸುಪ್ರೀಂ ಚಲ ಇದ್ದರು.