

* ಕಿರುವಾರ ಎಸ್.ಸುದರ್ಶನ್, ಕೋಲಾರ
ಒಂದು ಕಾಲದಲ್ಲಿ ಜನರ ಮನೆ ಮಾತಾಗಿದ್ದ ಕೋಲಾರ&ಚಿಕ್ಕಬಳ್ಳಾಪುರ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಸರ್ಕಾರದ ರ್ನಿಲಕ್ಷ$್ಯದಿಂದ ಇದೀಗ ಜನರಿಂದ ದೂರವಾಗುತ್ತಿರುವ ಭೀತಿ ಕಾಡುತ್ತಿದೆ.
ಬ್ಯಾಂಕಿನ ಆಡಳಿತ ಮಂಡಳಿ ಅಧಿಕಾರವಧಿಯು 2023ರ ನ.17ರಂದು ಮುಗಿದಿದ್ದು, ಆಗ ಬ್ಯಾಂಕಿನಿಂದ 1,580 ಕೋಟಿ ರೂ. ವಿವಿಧ ರೀತಿಯ ಸಾಲ ವಿತರಣೆ ಮಾಡಲಾಗಿತ್ತು, ಆ ಪೈಕಿ ಮಹಿಳಾ ಸ್ವ ಸಹಾಯ ಸಂಗಳಿಗೆ 730 ಕೋಟಿ ರೂ. ನೀಡಲಾಗಿತ್ತು. ಅದರಲ್ಲಿ 460 ಕೋಟಿ ರೂ. ಔಟ್ ಸ್ಟಾ$ಂಡಿಗ್ ಇದ್ದು, ಮರುಪಾವತಿಯಾಗಿದ್ದ ಮೊತ್ತವನ್ನು ಅಪೆಕ್ಸ್ ಮತ್ತು ನಬಾರ್ಡ್ಗೆ ಪಾವತಿ ಮಾಡಲಾಗಿದೆ, ಮತ್ತೆ ಅದನ್ನು ಡ್ರಾಯಲ್ಸ್ ಮಾಡಲು ಅಧಿಕಾರಿಗಳು ಮುಂದಾಗಿಲ್ಲ. ಇದರಿಂದಾಗಿ ಮತ್ತೆ ಬ್ಯಾಂಕ್ ಅವನತಿಯತ್ತ ಮುಖ ಮಾಡಿ ನಿಂತಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ.
ಆಡಳಿತಾಧಿಕಾರಿಯ ನೇಮಕದ ನಂತರ ಅಧಿಕಾರಿಗಳು ಕಚೇರಿಯಿಂದ ಹೊರಗೆ ಬಂದು ಸಾಲ ವಸೂಲಿ ಮಾಡುವ ಪ್ರಯತ್ನ ಮಾಡಲಿಲ್ಲ. ಆಡಳಿತಾಧಿಕಾರಿ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಕಚೇರಿಗೆ ಸಕಾಲಕ್ಕೆ ಆಗಮಿಸಿ ಪ್ರಗತಿಯ ಬಗ್ಗೆ ಗಮನ ಹರಿಸಲಿಲ್ಲ. ಆದ್ದರಿಂದ ಅಧಿಕಾರಿಗಳ ಕಾರ್ಯವೈಖರಿಯೇ ಬ್ಯಾಂಕ್ ಪರಿಸ್ಥಿತಿ ಹದಗೆಡಲು ಮೂಲ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ, ಸ್ತ್ರೀ ಶಕ್ತಿ ಸಂಗಳ ಸದಸ್ಯರಿಗೆ ಆರ್ಥಿಕ ಶಕ್ತಿ ತುಂಬಿದ ಬ್ಯಾಂಕ್ ಈಗ ಆ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಆಡಳಿತ ಮಂಡಳಿಯ ಅಧಿಕಾರವಧಿ ಮುಗಿದ ಮೇಲೆ ಸಾಲ ಸೌಲಭ್ಯ ನೀಡುವ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಸ್ತ್ರೀ ಶಕ್ತಿ ಸಂಗಳಿಗೆ ಸಾಲ ಮಂಜೂರು ಮಾಡಿಲ್ಲ.
ಜತೆಗೆ ಆಡಳಿತ ಮಂಡಳಿಯ ಅಧಿಕಾರವಧಿಯಲ್ಲಿ ಸಾಲ ವಿತರಣೆ, ಸಾಲ ಮರು ಪಾವತಿ ಸಮರ್ಪಕವಾಗಿ ನಡೆಯುತ್ತಿತ್ತು, ಆಡಳಿತಾಧಿಕಾರಿ ನೇಮಕವಾದ ನಂತರ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ. ಅಲ್ಲದೆ ಸಾಲ ಮರುಪಾವತಿ ಮಾಡದೆ ಇರುವ ಸ್ತ್ರೀ ಶಕ್ತಿ ಸಂಗಳಿಗೆ, ರೈತರಿಗೆ, ಅಧಿಕಾರಿಗಳು ನೋಟಿಸ್ ನೀಡುವ ಮೂಲಕ ಕಿರುಕುಳ ಶುರು ಮಾಡಿದ್ದಾರೆ ಎನ್ನಲಾಗಿದೆ.
ಡಿಸಿಸಿ ಬ್ಯಾಂಕ್ ಚೇತರಿಕೆಯಾದ ಮೇಲೆ ಗ್ರಾಮೀಣ ಭಾಗದ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಗಳು ಸಹ ಆರ್ಥಿಕ ಶಕ್ತಿ ಪಡೆದುಕೊಂಡವು. ಬೆಳೆ ಸಾಲ, ಮಹಿಳಾ ಸ್ವಸಹಾಯ ಸಂಗಳಿಗೆ ಸಾಲ ಸೇರಿ ವಿವಿಧ ರೀತಿಯ ಸಾಲಗಳನ್ನು ನೀಡಲು ಮುಂದಾದವು. ಬ್ಯಾಂಕ್ನ ಆಡಳಿತ ಮಂಡಳಿಯ ಅಧಿಕಾರವಧಿ ಮುಗಿದಿದ್ದು ಮಹಿಳಾ ಸಂಗಳ ಸದಸ್ಯರು ಸಕಾಲಕ್ಕೆ ಸಾಲದ ಕಂತನ್ನು ಪಾವತಿ ಮಾಡುತ್ತಿಲ್ಲ. ಮರು ಪಾವತಿ ಮಾಡಿದರೆ ಮತ್ತೆ ಸಾಲ ಸಿಗುತ್ತದೊ ಇಲ್ಲವೋ ಎಂಬ ಅನುಮಾನದಿಂದ ಹಿಂದೇಟು ಹಾಕುತ್ತಿದ್ದಾರೆ.
* ಸಿಎಂ ಸಿದ್ದರಾಮಯ್ಯ ಹೇಳಿಕೆ ಪರಿಣಾಮ
ಕಳೆದ ವಿಧಾನ ಸಭೆ ಚುನಾವಣೆಯ ಪೂರ್ವದಲ್ಲಿ ತಾಲೂಕಿನ ವೇಮಗಲ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳಾ ಸಂಗಳ ಸಾಲ ಮನ್ನಾದ ಬಗ್ಗೆ ಹೇಳಿಕೆ ನೀಡಿದ್ದರು. ಇದು ಸಾಲ ಮರುಪಾವತಿ ಮಾಡುವುದರ ಮೇಲೆ ತೀವ್ರ ಪರಿಣಾಮ ಬೀರಿತು. ಈ ಹೇಳಿಕೆಯೂ ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಲ್ಲದೆ ಇಡೀ ರಾಜ್ಯಮಟ್ಟದಲ್ಲೇ ಭಾರಿ ಸಂಚಲನ ಮೂಡಿಸಿತು. ಅದು ಈಗ ಸಾಲ ಮರುಪಾವತಿಯ ಮೇಲೂ ಪರಿಣಾಮ ಬೀರಿದಂತಾಗಿದೆ.
* ಧ್ವನಿ ಎತ್ತದ ಆಡಳಿತ ಪಕ್ಷದವರು
ಬ್ಯಾಂಕ್ ಚೇತರಿಕೆ ಆಗಿದ್ದು ಜಿಲ್ಲೆಯ ಕೆಲ ರಾಜಕಾರಣಿಗಳಿಗೂ ಅನುಕೂಲವಾಯಿತು ಎಂದರೆ ತಪ್ಪಾಗಲಾರದು. ಚುನಾವಣೆಯು ಸಮೀಪಿಸುತ್ತಿದ್ದಂತೆ ರೈತರಿಗೆ, ಮಹಿಳೆಯರಿಗೆ, ಬೆಂಬಲಿಗರಿಗೆ ಸಾಲ ಕೊಡಿಸುವುದು ಸಕ್ರಿಯವಾಗಿ ನಡೆಯಿತು. ವೇದಿಕೆಗಳಲ್ಲಿ ಆಡಳಿತ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಹಾಡಿ ಹೊಗಳಿದರು.
ಆದರೆ ಚುನಾವಣೆಯಲ್ಲಿ ಸೋಲುಂಡವರು ಇದೀಗ ಪ್ರಭಾವ ಬಳಸಿ ಸರ್ಕಾರದ ಮೇಲೆ ಒತ್ತಡ ತಂದು ಚುನಾವಣೆಗೆ ಅಡ್ಡಿ ಪಡಿಸುತ್ತಿದ್ದು, ಅಧಿಕಾರದಲ್ಲಿರುವ ಎರಡೂ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಚಿವರು ಚುನಾವಣೆ ನಡೆಸುವಂತೆ ಒತ್ತಡ ಹೇರುವಲ್ಲಿ ವಿಲರಾಗಿದ್ದಾರೆ.
* ನೌಕರರಿಗೆ ಸಕಾಲಕ್ಕೆ ಸಂಬಳವಿಲ್ಲ!
ಡಿಸಿಸಿ ಬ್ಯಾಂಕ್ನಿಂದ ನೀಡಲಾಗಿರುವ ಸಾಲ ಮರುಪಾವತಿ ಸಮರ್ಪಕವಾಗಿ ನಡೆಯದಿರುವುದು ಮತ್ತು ಗ್ರಾಹಕರು ಠೇವಣಿ ಹಣ ಹಿಂತೆಗೆತ ಹೆಚ್ಚಾದ ಕಾರಣ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ಆಗಬೇಕಿದ್ದ ವೇತನ ತಿಂಗಳ ಕೊನೆಯ ತನಕವು ಆಗುತ್ತಿರುವುದು ಕಂಡುಬರುತ್ತಿದ್ದು, ನೌಕರರಲ್ಲೂ ವೃತ್ತಿ ಆತಂಕ ತಂದಿದೆ.
* ನೋಟಿಸ್ ಕಿರುಕುಳ ಶುರು
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಶಾಖೆಗಳು ಹಾಗೂ ಸೊಸೈಟಿಗಳಿಂದ ರೈತರಿಗೆ, ಮಹಿಳಾ ಸ್ವ ಸಹಾಯ ಸಂಗಳಿಗೆ ಸಾಲ ನೀಡಲಾಗಿದ್ದು, ಸಕಾಲಕ್ಕೆ ಸಾಲದ ಕಂತು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವವರಿಗೆ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸೊಸೈಟಿ ಸಿಇಒಗಳು ನೋಟಿಸ್ ನೀಡಿ ಸಾಲ ಮರುಪಾವತಿ ಮಾಡುವಂತೆ ಸೂಚಿಸಿದ್ದಾರೆ. ಇದು ರೈತರ, ಮಹಿಳಾ ಸಂಗಳ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
* ಸಾಲ ವಿತರಣೆಗೆ ಸೂಚನೆ
ಕೋಲಾರ ಜಿ.ಪಂ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕೆಡಿಪಿ ಸಭೆಗೆ ಹಾಜರಾಗಿದ್ದ ಡಿಸಿಸಿ ಬ್ಯಾಂಕ್ನ ಸಾಲ ವಿತರಣಾ ವಿಭಾಗದ ವ್ಯಸ್ಥಾಪಕರಿಗೆ ಏಕೆ ಬ್ಯಾಂಕಿನಿಂದ ಸಾಲ ವಿತರಣೆ ಮಾಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕರು, ಚುನಾವಣೆ ನಡೆದಿಲ್ಲ ಎಂದು ಸಬೂಬು ಹೇಳಿದರು. ಇದಕ್ಕೆ ಗರಂ ಆದ ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡು ಸಾಲ ವಿತರಣೆಗೂ, ಚುನಾವಣೆಗೂ ಏನು ಸಂಬಂದ, ಸಾಲ ವಿತರಿಸಿ ಎಂದು ಸೂಚಿಸಿದರು.
ಕೋಟ್...
ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ವಿತರಿಸಬೇಕು, ಆಡಳಿತ ಮಂಡಳಿಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ರೈತ ಸಂದಿಂದ ಶುಕ್ರವಾರ ಬೆಳಗ್ಗೆ 10.30ರಿಂದ ಅರ್ನಿಧಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಮಹಿಳೆಯರು ಆಗಮಿಸಬೇಕು.
> ಕೆ.ನಾರಾಯಣಗೌಡ, ರಾಜ್ಯ ರೈತ ಸಂದ ಉಪಾಧ್ಯಕ್ಷ, ಕೋಲಾರ