ಡಿಸಿಸಿ ಬ್ಯಾಂಕ್​ ಚುನಾವಣೆ, ಸಾಲ ವಿತರಣೆಗೆ ಪಟ್ಟು

raitha protest
ಕೋಲಾರ ಜಿಲ್ಲಾಡಳಿತ ಕಚೇರಿ ಎದುರು ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೋಳಿ, ಹೂವು ಬೆಳೆ ಸಮೇತ ಗುರುವಾರ ಪ್ರತಿಭಟನೆ ನಡೆಸಿದರು.
Published on

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಅಡಳಿತ ಮಂಡಳಿ ಚುನಾವಣೆ ನಡೆಸಬೇಕು, ಮಹಿಳಾ ಸಂಗಳಿಗೆ ಸಾಲ ಸೌಲಭ್ಯ ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಕಚೇರಿ ಎದುರು ಜಮಾಯಿಸಿದ ರಾಜ್ಯ ರೈತ ಸಂ ಹಾಗೂ ಹರಿಸು ಸೇನೆ ಕಾರ್ಯಕರ್ತರು, ಕೋಳಿ, ಹೂವು ಬೆಳೆ ಸಮೇತ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಡಿಸಿ ಅಕ್ರಂಪಾಷಾಗೆ ಮನವಿ ಸಲ್ಲಿಸಿದರು.

ರೈತ ಸಂದ ಮಹಿಳಾ ಟಕದ ಅಧ್ಯೆ ಎ.ನಳಿನಿಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್​ಗೆ ಕೂಡಲೇ ಚುನಾವಣೆ ನಿಗದಿ ಮಾಡಿ, ಸ್ಥಗಿತವಾಗಿರುವ ಸಾಲ ವಿತರಣೆ ಮುಂದುವರೆಸಿಬೇಕು. ಖಾಸಗಿ ಫೈನಾನ್ಸ್​ ಹಾವಳಿಯಿಂದ ರೈತರು, ಮಹಿಳೆಯರನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಡಿಸಿಸಿ ಬ್ಯಾಂಕ್​ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವವರು ಯಾರು?. ಖಾಸಗಿ ೈನಾನ್ಸ್​ ಮಾಫಿಯಾ ಜತೆ ಕಣ್ಣಿಗೆ ಕಾಣದ ಬ್ಯಾಂಕ್​ ವಿರೋಧಿಗಳು ಕೈ ಜೋಡಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಹೀನಾಯ ಸ್ಥಿತಿಯಲ್ಲಿದ್ದ ಬ್ಯಾಂಕ್​ನ್ನು ಅಭಿವೃದ್ಧಿಪಡಿಸಿ ಖಾಸಗಿ ಫೈನಾನ್ಸ್​ ಹಾವಳಿಯಿಂದ ಮಹಿಳೆಯರು, ರೈತರನ್ನು ರಕ್ಷಣೆ ಮಾಡಿದ್ದ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೊವಿಂದೇಗೌಡರು ಚುನಾವಣೆ ನಡೆಸದ ಅಧಿಕಾರಿಗಳ ವಿರುದ್ಧ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

* ಸಾಲ ಮನ್ನಾ ಮಾಡಲು ಒತ್ತಾಯ

ಚುನಾವಣಾ ವೇಳೆ ವೇಮಗಲ್​ನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಹಕಾರ ಸಂಘಗಳಲ್ಲಿ ಮಹಿಳೆಯರ ಎಲ್ಲ ಸಾಲ ಮನ್ನಾ ಎಂದು ಮಾತು ಕೊಟ್ಟಿದ್ದರು. ಈಗ ಮಾತಿನ ಪ್ರಕಾರ ಸಾಲ ಮನ್ನಾ ಮಾಡಬೇಕು ಎಂದು ಸಾಲ ವಂಚಿತ ನೊಂದ ರೈತ ಮಹಿಳೆ ಶೈಲಜ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂದ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್​, ಬಂಗವಾದಿ ನಾಗರಾಜಗೌಡ, ತಿಮ್ಮಣ್ಣ, ವೆಂಕಟೇಶಪ್ಪ, ಸುಪ್ರೀಂ ಚಲ, ಶಿವಾರೆಡ್ಡಿ, ಹೆಬ್ಬಣಿ ಆನಂದ್​ರೆಡ್ಡಿ, ಯಲ್ಲಪ್ಪ, ಹರೀಶ್​, ಚಂದ್ರಪ್ಪ, ತೆರ್ನಹಳ್ಳಿ ಆಂಜಿನಪ್ಪ ಪಾರುಕ್​ಪಾಷಾ, ರಾಜೇಶ್​, ರತ್ನಮ್ಮ, ವೆಂಕಟಮ್ಮ, ಭಾಗ್ಯಮ್ಮ, ಕಾಂತಮ್ಮ, ಚೌಡಮ್ಮ, ವೆಂಕಟರತ್ನ ಮುನಿಯಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net