

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ನಡೆಸಿ ಗ್ರಾಹಕರಿಗೆ ಸಾಲ ಸೌಲಭ್ಯ ಕಲ್ಪಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು, ನಗರದ ಡಿಸಿಸಿ ಬ್ಯಾಂಕ್ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸಂ ಮಹಿಳಾ ಟಕದ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಮಾತನಾಡಿ, ಡಿಡಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡುವುದನ್ನು ಸ್ಥಗಿತಗೊಳಿಸಿರುವುದರಿಂದ ಮಹಿಳೆಯರು, ರೈತರು ಖಾಸಗಿ ಫೈನಾನ್ಸ್ ಮೋರೆ ಹೋಗುವಂತಾಗಿದೆ. ಬ್ಯಾಂಕ್ನಲ್ಲಿ ಕೋಟಿ ಕೋಟಿ ಸಾಲ ಪಡೆದು ಕಂತು ಪಾವತಿ ಮಾಡದೇ ಇರುವವರ ಸಾಲ ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಲರಾಗಿದ್ದಾರೆ ಎಂದು ಆರೋಪಿಸಿದರು.
ವಾರದೊಳಗೆ ಬ್ಯಾಂಕಿಗೆ ಚುನಾವಣೆ ನಿಗದಿ ಮಾಡಿ ಆಡಳಿತ ಮಂಡಳಿ ರಚನೆಗೆ ಕ್ರಮವಹಿಸಬೇಕು. ಇಲ್ಲದಿದ್ದರೆ ಬ್ಯಾಂಕನ್ನು ಸಂಪೂರ್ಣ ಬಂದ್ ಮಾಡಿ, ಬ್ಯಾಂಕ್ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಸಹಕಾರ ಬ್ಯಾಂಕಿಗೆ ಚುನಾವಣೆ ನಡೆಸಿ ಪುಣ್ಯ ಕಟ್ಟಿಕೊಳ್ಳಿ. ಇಲ್ಲವೇ ಎಲ್ಲ ರೈತರ ಖಾಸಗಿ ಸಾಲ ಸಂಬಂಧಫಟ್ಟ ಜನಪ್ರತಿನಿಧಿಗಳು, ಇಲ್ಲವೇ ಬ್ಯಾಂಕ್ ಸಿಬ್ಬಂದಿಯೇ ತೀರಿಸಬೇಕು. ಬ್ಯಾಂಕ್ ಉಳಿವಿಗಾಗಿ ಸಂಕ್ರಾಂತಿ ಹಬ್ಬದ ನಂತರ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬ್ಯಾಂಕ್ ಎಜಿಎಂ ಶಿವಕುಮಾರ್, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಚುನಾವಣೆ ಬಗ್ಗೆ ಚರ್ಚಿಸಲಾಗುವುದು. ಖಾಸಗಿ ಫೈನಾನ್ಸ್ ಹಾವಳಿಯಿಂದ ಮಹಿಳೆಯರು, ರೈತರನ್ನು ತಪ್ಪಿಸಲು ಸಾಲ ಸೌಲಭ್ಯ ನೀಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಸಂದ ಪದಾಧಿಕಾರಿಗಳಾದ ಈಕಂಬಳ್ಳಿ ಮಂಜುನಾಥ್, ಶಿವಾರೆಡ್ಡಿ, ಚಂದ್ರಪ್ಪ, ತಿಮ್ಮಣ್ಣ, ವೆಂಕಟೇಶಪ್ಪ, ಯಲ್ಲಣ್ಣ, ಹರೀಶ್, ನಾಗರಾಜ್, ಫಾರೂಖ್, ಆಂಜಿನಪ್ಪ, ಕೇಶವ, ಸುಪ್ರೀಂಚಲ, ರತ್ನಮ್ಮ, ಶೈಲಜ, ಗೌರಮ್ಮ, ಮುನಿವೆಂಕಟಮ್ಮ ಇದ್ದರು.