ರೈತರ ಆರ್ಥಿಕ ಸಬಲೀಕರಣಕ್ಕೆ ಬದ್ಧ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ

13-klr-4 dcc bank
Published on

ಕೋಲಾರ: ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಆಡಳಿತ ಮಂಡಳಿಯ ಕಾರ್ಯ ಪ್ರವತ್ತಿಗೆ ಸಿಕ್ಕ ಬೆಂಬಲದಿಂದ ಆತ್ಮಸ್ಥೈರ್ಯ ಹೆಚ್ಚಾಗಿದ್ದು, ಅಧಿಕಾರದ ಉಳಿದ ಅವಧಿಯನ್ನು ಬಡ ರೈತರು ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮೀಸಲಿಡುವುದಾಗಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಶನಿವಾರ ಬ್ಯಾಂಕಿನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾತನಾಡಿ, ಸರ್ವ ಸದಸ್ಯರ ಸಭೆಯನ್ನು ತಡೆಯಲು ಕೆಲವರು ಪ್ರಯತ್ನಿಸಿದ್ದರು, ಆದರೆ ಸದಸ್ಯರು ಅಪಪ್ರಚಾರಕ್ಕೆ ಕಿವಿಗೊಡದೆ ಸಭೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಡಳಿತ ಮಂಡಳಿಯ ಜನಪರವಾದ ನಿರ್ಧಾರಗಳಿಗೆ ಬೆಂಬಲ ನೀಡುವ ಮೂಲಕ ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿರುವುದು ನನ್ನ ಸೌಭಾಗ್ಯ ಎಂದರು.

ಡಿಸಿಸಿ ಬ್ಯಾಂಕ್‌ಗೆ ನಾನು ಖಾಯಂ ಅಧ್ಯಕ್ಷನಲ್ಲ, ನನ್ನ ಅಧಿಕಾರದ ಅವಧಿಯಲ್ಲಿ ಬ್ಯಾಂಕಿನಿಂದ ಬಡ ರೈತರು ಮತ್ತು ಮಹಿಳೆಯರಿಗೆ ಕೈಲಾದಷ್ಟು ಪ್ರಯೋಜನವಾಗಬೇಕೆಂಬ ಸ್ಪಷ್ಟ ಗುರಿಯೊಂದಿಗೆ ಕೆಲಸ ವಾಡುತ್ತಿರುವೆ. ರಾಜಕೀಯ ದುರುದ್ದೇಶದಿಂದ ವ್ಯವಸ್ಥೆಯನ್ನು ಹಾಳುಗೇಡುವುದು ಶೋಭೆ ತರುವುದಿಲ್ಲ ಎಂದು ವಿರೋಧಿಗಳಿಗೆ ಕಿವಿವಾತು ಹೇಳಿದರು.

ಬ್ಯಾಂಕ್ ಉಳಿಯಬೇಕಾದರೆ ಕೇವಲ ಆಡಳಿತ ಮಂಡಳಿ ಪ್ರಾವಾಣಿಕವಾಗಿ, ಪಾರದರ್ಶಕವಾಗಿ ಕೆಲಸ ವಾಡಿದರೆ ಸಾಲದು. ಗ್ರಾಹಕರು, ಠೇವಣಿದಾರರ ಹಣದಿಂದ ಸಂಬಳ ಪಡೆಯುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಬದ್ಧತೆಯಿಂದ ಜವಾಬ್ದಾರಿ ನಿರ್ವಹಿಸಿದಾಗ ಬ್ಯಾಂಕ್ ನೂರಾರು ವರ್ಷ ಯಶಸ್ವಿಯಾಗಿ ನಡೆಯುತ್ತದೆ, ನಾವು ತಪ್ಪು ವಾಡಿದಾಗ ತಿದ್ದುವ ಅಧಿಕಾರ ನಿಮಗಿದೆ. ಜತೆಗೆ ತಾವುಗಳು ಸಹ ಪ್ರತಿದಿನ ಪ್ರತಿಕ್ಷಣ ಬ್ಯಾಂಕಿನ ಹಿತಕ್ಕಾಗಿ ಶ್ರಮಿಸುವ ಮೂಲಕ ವಿರೋಧಿಗಳ ಮನಸ್ಸು ಗೆಲ್ಲುವಂತಾಗಬೇಕು ಎಂದರು.

ಸರ್ವ ಸದಸ್ಯರ ಸಭೆಯಲ್ಲಿ ಸಿಕ್ಕ ಬೆಂಬಲಕ್ಕೆ ಋಣಿಯಾಗಿದ್ದೇನೆ, ಹಾಗಾಂತ ಅಹಂದಿಂದ ವರ್ತಿಸುವುದಿಲ್ಲ, ಜವಾಬ್ದಾರಿ ಹೆಚ್ಚಾಗಿದೆ, ಗ್ರಾಹಕರು ಮತ್ತು ಠೇವಣಿದಾರರ ಹಣ ವ್ಯರ್ಥವಾಗಲು ಬಿಡುವುದಿಲ್ಲ, ಅದೇ ರೀತಿ ಸಾಲ ನೀಡುವಿಕೆ ಹಾಗೂ ವಸೂಲಿಯಲ್ಲಿ ಪಕ್ಷಪಾತ ವಾಡುವುದಿಲ್ಲ ಎಂದರು.

ನನಗೂ ವೈಯಕ್ತಿಕ ಜೀವನವಿದೆ: ಬ್ಯಾಂಕಿಗೆ ರಜೆ ಇದ್ದಾಗಲೂ ಪ್ರಗತಿ ಪರಿಶೀಲನೆ ವಾಡುವುದು ನನ್ನ ಸ್ವಾರ್ಥಕ್ಕಾಗಿ ಅಲ್ಲ. ನನಗೂ ವೈಯಕ್ತಿಕ ಜೀವನ ಇದೆ, ಬ್ಯಾಂಕ್ ಸದೃಢವಾಗಿ ಬೆಳೆದಾಗ ನನಗೆ ವಿಶ್ರಾಂತಿ ಸಿಗುತ್ತದೆ ಎಂದರು.

ಈಗಾಗಲೆ ಅನ್ನದಾತನಿಗೆ ಅಗತ್ಯವಾದ ಎಲ್ಲ ಸಲಕರಣೆಗಳು ಒಂದೇ ಸೂರಿನಡಿ ಸಿಗುವ ಸೌಲಭ್ಯಗಳುಳ್ಳ ರೈತವಾಲ್ ಸ್ಥಾಪನೆಗೆ ಚಿಂತನೆ ನಡೆದಿದೆ, ಜತೆಗೆ ಸೊಸೈಟಿಗಳ ವ್ಯಾಪ್ತಿಯಲ್ಲಿ ವಿವಿಧೋದ್ದೇಶ ಸೇವಾ ಕೇಂದ್ರಗಳ ಸ್ಥಾಪನೆಯ ಮೂಲಕ ರೈತರು, ಮಹಿಳೆಯರಿಗೆ ನೆರವಾಗೋಣ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಯಲವಾರ ಸೊಣ್ಣೇಗೌಡ, ಬ್ಯಾಂಕಿನ ಎಜಿಎಂಗಳಾದ ಶಿವಕುವಾರ್, ಬೈರೇಗೌಡ, ಅಧಿಕಾರಿಗಳಾದ ಅರುಣ್ ಕುವಾರ್, ಪದ್ಮಮ್ಮ, ಉಪಸ್ಥಿತರಿದ್ದರು.

ಫ್ಯಾಕ್ಸ್‌ಗಳಲ್ಲಿ ಪಾರದರ್ಶಕ ಆಡಳಿತ ಮತ್ತು ವ್ಯವಸ್ಥೆ ಇರಬೇಕೆಂಬ ಉದ್ದೇಶದಿಂದ ದೇಶದಲ್ಲೇ ಮೊದಲು ನಮ್ಮ ಬ್ಯಾಂಕಿನ ವ್ಯಾಪ್ತಿಯ ಎಲ್ಲ ಫ್ಯಾಕ್ಸ್‌ಗಳನ್ನು ಗಣಕೀಕರಣಗೊಳಿಸಲಾಗುತ್ತಿದ್ದು, ಈವರೆಗೆ ಶೇ.75 ಪ್ರಗತಿ ಸಾಧಿಸಲಾಗಿದೆ, ಯೋಜನೆ ಸಂಪೂರ್ಣಗೊಂಡರೆ ನಮ್ಮ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚುವುದಲ್ಲದೆ ವಿರೋಧಿಗಳು ಸಹ ತಣ್ಣಗಾಗುತ್ತಾರೆ. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net