

ಬೆಂಗಳೂರು: ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಲ್ಲಿ ಅಧಿಸೂಚಿಸಲ್ಪಟ್ಟ ಅರ್ಹ ದಿನಗೂಲಿ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರ ಪರಿಷ್ಕರಿಸಿ ಆದೇಶಿಸಿದೆ.
2014ರ ಸೆ.19ರಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಅರ್ಹ ದಿನಗೂಲಿ ನೌಕರರಿಗೆ ನಿಗದಿಪಡಿಸಲಾಗಿರುವ ಮಾನದಂಡಗಳಿಗೆ ಒಳಪಟ್ಟು ಪ್ರಸ್ತುತ ನೀಡಲಾಗುತ್ತಿರುವ ಶೇ.75 ತುಟ್ಟಿಭತ್ಯೆಯನ್ನು ಶೇ.90ಕ್ಕೆ ಹೆಚ್ಚಿಸಲಾಗಿದೆ. ಜತೆಗೆ ಮನೆಬಾಡಿಗೆ ಭತ್ಯೆಯನ್ನು ಶೇ.75ರಿಂದ ಶೇ.90ಕ್ಕೆ ನಿಗದಿಪಡಿಸಲಾಗಿದೆ. ಇದು 2019ರ ಡಿ.1ರಿಂದ ಜಾರಿಗೆ ಬರಲಿದೆ.