ದಾವೂದ್ ಭಂಟ ದಾನಿಶ್​ ಚಿಕ್ನಾ ಬಂಧನ

chik
Published on

ಕೋಟಾ: ಮುಂಬೈನಲ್ಲಿ ದಾವೂದ್ ಇಬ್ರಾಹಿಂನ ಡ್ರಗ್ಸ್​ ದಂಧೆ ನೋಡಿಕೊಳ್ಳುವ ದಾನಿಶ್ ಮರ್ಚೆಂಟ್ ಅಲಿಯಾಸ್ ದಾನಿಶ್ ಚಿಕ್ನಾ ಪೊಲೀಸರ ವಶವಾಗಿದ್ದಾನೆ. ಎನ್​​ಸಿಬಿ ಮತ್ತು ರಾಜಸ್ತಾನದ ಕೋಟ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ದಾನಿಶ್​ನನ್ನು ಕೋಟ ಪಟ್ಟಣದಿಂದ ನಿನ್ನೆ ರಾತ್ರಿ ಬಂಧಿಸಲಾಗಿದೆ.

ಇತ್ತೀಚೆಗೆ ಮಹಾರಾಷ್ಟ್ರದ ಡೊಂಗ್ರಿಯಲ್ಲಿ ಡ್ರಗ್ ಫ್ಯಾಕ್ಟರಿ ನಡೆಸುವ ಚಿಕ್ನಾನ ಪತ್ತೆ ಕಾರ್ಯದ ಅಂಗವಾಗಿ ಎನ್​ಸಿಬಿ ಡೊಂಗ್ರಿಯಲ್ಲಿ ದಾಳಿ ನಡೆಸಿತ್ತು. ಆತನ ಗ್ಯಾಂಗ್​ನ ಪ್ರಮುಖ ಸದಸ್ಯನೊಬ್ಬನನ್ನು ಬಂಧಿಸಿ, ಭಾರೀ ಪ್ರಮಾಣದ ಕೋಡೀನ್ ಆಧರಿತ ಕಾಫ್​ ಸಿರಪ್​ಅನ್ನು ಜಪ್ತಿ ಮಾಡಿತ್ತು.

ಕಳೆದ ರಾತ್ರಿ ಎನ್​ಸಿಬಿ ನೀಡಿದ ಮಾಹಿತಿಯ ಮೇರೆಗೆ ಕೋಟಾ ಪೊಲೀಸರು ಚಿಕ್ನಾನನ್ನು ಬಂಧಿಸಿದ್ದಾರೆ. ಆತನ ವಾಹನದಲ್ಲಿದ್ದ ಡ್ರಗ್ಸ್ ಕೂಡ ವಶಪಡಿಸಿಕೊಳ್ಳಲಾಗಿದೆ. ಚಿಕ್ನಾ ವಿರುದ್ಧ ಕೊಲೆಯ ಪ್ರಕರಣವೂ ಸೇರಿದಂತೆ 6 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net