ದಾವಣಗೆರೆಯ ಕನ್ನಡ ಮೇಷ್ಟ್ರು ಇನ್ನಿಲ್ಲ

Untitled design (17)
Published on

ಬೆಂಗಳೂರು: ಜಾನಪದ ತಜ್ಞ, ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕರಾಗಿದ್ದ ಡಾ. ಎಂ.ಜಿ. ಈಶ್ವರಪ್ಪ (76) ಅನಾರೋಗ್ಯದಿಂದ ಇಂದು (ಜೂ.01) ಸಂಜೆ ಬೆಂಗಳೂರಿನಲ್ಲಿ ನಿಧನರಾದರು.

ಈಶ್ವರಪ್ಪ ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಒಂದು ವಾರದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಶ್ವರಪ್ಪ ಅವರು ಹಿರಿಯ ಜಾನಪದ ತಜ್ಞ ಜೀ.ಶಂ. ಪರಮಶಿವಯ್ಯ ಮಾರ್ಗದರ್ಶನದಲ್ಲಿ ‘ಚಿತ್ರದುರ್ಗ ಜಿಲ್ಲಾ ವ್ಯವಸಾಯ ಜಾನಪದ’ ವಿಷಯದ ಬಗ್ಗೆ ಪಿಎಚ್.ಡಿ. ಪಡೆದಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ನಾಟಕ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ರಾಜ್ಯ ಸರ್ಕಾರದಿಂದ ‘ಜಾನಪದ ತಜ್ಞ’ ಪ್ರಶಸ್ತಿ ಬಂದಿತ್ತು. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು. ದಾವಣಗೆರೆಯಲ್ಲಿ ಪ್ರತಿಮಾ ಸಭಾ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ ರಂಗಭೂಮಿ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net