

Lover: ಪ್ರೀತಿಸಿ ಯುವಕನ ಜತೆ ಪರಾರಿಯಾದ ಮಗಳ ತಿಥಿ ಕಾರ್ಯ ಮಾಡಿ ಊರಿಗೆ ಊಟ ಹಾಕಿಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಈಚೆಗೆ ನಡೆದಿದೆ.
ಗ್ರಾಮದ ಯುವತಿ ಅದೇ ಊರಿನ ಯುವಕನೊಂದಿಗೆ ಓಡಿಹೋಗಿದ್ದಾಳೆ. ಇದರಿಂದ ಯುವತಿ ತಂದೆ ತೀವ್ರ ಮನನೊಂದು ಮಗಳ ತಿಥಿ ಕಾರ್ಯ ಮಾಡಿ ಬಂಧು-ಬಳಗ, ಸಂಬಂಧಿಕರನ್ನು ಕರೆಸಿ ಊಟ ಹಾಕಿಸಿದ್ದಾನೆ.
ಅಲ್ಲದೆ, ಮಗಳ ಶ್ರದ್ಧಾಂಜಲಿಯ ಬ್ಯಾನರ್ ಸಹ ಅಳವಡಿಸಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ಸಹ ನೀಡಿದ್ದಾನೆ.