ಅಕ್ರಮ ಸಂಬಂಧ ಪ್ರಶ್ನಿಸಿದಕ್ಕೆ ತಂದೆಯನ್ನು ಕೊಂದ ಮಗಳು? | Kills

dk - 2025-07-10T191312.034
Published on

Kills: ಆಕ್ರಮ ಸಂಬಂಧ ಪ್ರಶ್ನಿಸಿದಕ್ಕೆ ಸ್ವಂತ ತಂದೆಯನ್ನು ಮಗಳು ಕೊಂದಿರುವ ಘಟನೆ ಹೈದರಾಬಾದ್​ನಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ಇಲ್ಲಿನ ಹಳೆ ನಗರದಲ್ಲಿನ ಅಪಾರ್ಟಮೆಂಟ್​ವೊಂದರಲ್ಲಿ ಭದ್ರತಾ ಸಿಬ್ಬಂದಿ ವಡ್ಲೂರಿ ಲಿಂಗಂ(45) ಮೃತ. ಈತನನ್ನು ಕೊಂದು ನಗರದ ಹೊರ ವಲಯದ ಕೆರೆಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದ ಘಟನೆ ಎನು..?

ವಡ್ಲೂರಿ ಲಿಂಗಂ ಕುಟುಂಬ ಹೈದರಾಬಾದ್​ನಲ್ಲಿ ಕವಡಗಿರಿ ಪ್ರದೇಶದಲ್ಲಿ ವಾಸವಿದೆ. ಪತ್ನಿ ಹೈದರಾಬಾದ್​​ ಮನ್ಸಿಪಾಲಿಟಿಯಲ್ಲಿ ಸ್ವಿಪರ್​ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳು ಮನೀಷಾ. ಈಕೆ ತನ್ನ ಗಂಡನ ಸ್ನೇಹಿತ ಮೊಹಮ್ಮದ್​ ಜಾವೆದ್​ ಜತೆ ಆಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ಹಿನ್ನೆಲೆ ಪತಿ ಈಕೆ ವಿಚ್ಛೇದನ ನೀಡಿ ಹೊರಟು ಹೋಗಿದ್ದ.

ಬಳಿಕ ತಾಯಿಯ ಮನೆ ಸೇರಿದ್ದ ಮನೀಷಾ, ಮೊಹಮ್ಮದ್​ ಜಾವೆದ್​ ಜತೆ ಆಕ್ರಮ ಮುಂದುವೆರೆದಿತ್ತು. ಇದಕ್ಕೆ ಪ್ರತಿ ಸಾರಿ ಮನೆಯಲ್ಲಿ ಜಗಳ ಕೂಡ ಆಗುತ್ತಿತ್ತು. ಆದರೆ, ಮೊನ್ನೆ ಇದೇ ವಿಚಾರಕ್ಕೆ ಗಲಾಟೆಯಾದ ಕಾರಣ ವಡ್ಲೂರಿ ಲಿಂಗಂ ಅವರು ಮದ್ಯ ಕುಡಿದು ಮಲಗಿದಾಗ ದಿಂಬುನಿಂದ ಉಸಿರುಗಟ್ಟಿ ಕೊಲೆ ಮಾಡಿ, ಕೆರೆಗೆ ಎಸೆದಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ?

ಜು.7ರಂದು, ಸ್ಥಳೀಯರು ಕೊಳದಲ್ಲಿ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪ್ರಕರಣ ದಾಖಲಿಸಲಾಯಿತು. ತನಿಖೆಯ ಭಾಗವಾಗಿ, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕ್ಯಾಬ್ ಚಾಲಕನಿಂದ ಕೊಲೆಯ ಬಗ್ಗೆ ಪ್ರಮುಖ ಮಾಹಿತಿಯನ್ನು ಪಡೆಯಲಾಯಿತು. ಪೊಲೀಸರು ಶಂಕಿತರನ್ನು ಸಾಕ್ಷ್ಯಗಳೊಂದಿಗೆ ಎದುರಿಸಿದಾಗ, ಮೂವರೂ ಅಪರಾಧವನ್ನು ಒಪ್ಪಿಕೊಂಡರು. ಪ್ರಸ್ತುತ, ತಾಯಿ ಶಾರದಾ, ಮಗಳು ಮನೀಷಾ ಮತ್ತು ಗೆಳೆಯ ಮೊಹಮ್ಮದ್ ಜಾವೇದ್ ಅವರನ್ನು ಪೊಲೀಸರು ಬಂಧಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net