ಅತ್ತೆ ಸಾಯ್ಸೋಕೆ 2 ಮಾತ್ರೆ ಕೊಡಿ; ವೈದ್ಯನಿಗೆ ಮೆಸೇಜ್ ಕಳಿಸಿದ ಸೊಸೆ..bengaluru

Birth Control Pills
Published on
ಬೆಂಗಳೂರು: ( bengaluru )  ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧವು ಕಹಿ ಮತ್ತು ಸಿಹಿ ಎರಡನ್ನೂ ಒಳಗೊಂಡಿರುತ್ತದೆ. ಆದರೆ  ಬೆಂಗಳೂರಿನಲ್ಲಿ, ಒಬ್ಬಳು ಸೊಸೆ ತನ್ನ ಅತ್ತೆಯನ್ನು ಎಷ್ಟು ದ್ವೇಷಿಸುತ್ತಿದ್ದಳೆಂದರೆ ಅವಳ ಜೀವ ತೆಗೆಯಲು ಪ್ಲ್ಯಾನ್​​ ಮಾಡಿ   ವಾಟ್ಸಾಪ್​ ಸಂದೇಶ ಕಂಡು ಬೆಂಗಳೂರಿನ ವೈದ್ಯರೊಬ್ಬರು ಬೆಚ್ಚಿ ಬಿದ್ದಿದ್ದಾರೆ.
ಸೊಸೆ ವಾಟ್ಸಾಪ್‌ನಲ್ಲಿ ವೈದ್ಯರಿಗೆ ಸಂದೇಶ ಕಳುಹಿಸಿ ತನ್ನ ಅತ್ತೆಯನ್ನು ಕೊಲ್ಲಲು ಯಾವ ಔಷಧಿಯನ್ನು ಬಳಸಬಹುದು ಎಂದು ಕೇಳಿದಳು. ಮಹಿಳೆಯ ಸಂದೇಶವನ್ನು ಓದಿದ ನಂತರ ವೈದ್ಯರು ಆಘಾತಕ್ಕೊಳಗಾದರು. ಈ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಆ ಮಹಿಳೆ ಯಾರೆಂದು ಅವರಿಗೆ ತಿಳಿದಿಲ್ಲ...

ಬೆಂಗಳೂರು ಮೂಲದ ವೈದ್ಯರಾದ ಡಾ. ಸುನಿಲ್​ ಕುಮಾರ್​ ಅವರಿಗೆ ಇನ್​​ಸ್ಟಾಗ್ರಾಮ್​ನಲ್ಲಿ ಓರ್ವ ಮಹಿಳೆ ಪರಿಚಯವಾಗಿದ್ದಾಳೆ. ಮಹಿಳೆ ಇನ್​ಸ್ಟಾಗ್ರಾಮ್​ ಮೂಲಕ ಡಾ. ಸುನಿಲ್​ ಕುಮಾರ್​ ಅವರ ದೂರವಾಣಿ ಸಂಖ್ಯೆ ಪಡೆದಿದ್ದಾಳೆ. ನಂತರ, ಸೋಮವಾರ (ಫೆಬ್ರವರಿ 17) ರಂದು ಮಹಿಳೆ, ಡಾ. ಸುನಿಲ್​ ಕುಮಾರಿಗೆ ವಾಟ್ಸಾಪ್​ನಲ್ಲಿ ಸಂದೇಶ ಕಳುಹಿಸಿದ್ದಾಳೆ. ಸೊಸೆ ಅತ್ತೆಯನ್ನು ಸಾಯಿಸಲು ವೈದ್ಯರ ಬಳಿ ಮಾತ್ರೆ ಕೇಳಿದ್ದಾರೆ. ಆ ಬಳಿಕ ಮಹಿಳೆ ಕೂಡಲೇ ಸಂದೇಶಗಳನ್ನು ಡಿಲೀಟ್ ಮಾಡಿದ್ದು, ವೈದ್ಯರ ನಂಬರ್ ಬ್ಲಾಕ್ ಮಾಡಿದ್ದಾರೆ. ಮಹಿಳೆಯ ಸಂದೇಶ ಓದಿ ಶಾಕ್ ಆದ ವೈದ್ಯ ಸುನಿಲ್​ ಕುಮಾರ್​ ಸಂಜಯ್ ನಗರ ಪೊಲೀಸ್​ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.

ವೈದ್ಯರು ಹೇಳಿದ್ದೇನು?: 

ಸಹನಾ ಎಂಬುವರು ನನಗೆ 17ನೇ ತಾರೀಖು ಮೆಸೇಜ್ ಮಾಡಿದ್ದರು. ಕನ್ನಡದಲ್ಲಿ ಸಂದೇಶ ಕಳುಹಿಸಿ ಮಾತು ಆರಂಭಿಸಿದರು. ನೀವು ನನಗೆ ಬೈಯುವುದಿಲ್ಲ ಎಂದರೆ ನಿಮ್ಮನ್ನು ಒಂದು ಮಾತು ಕೇಳುತ್ತೇನೆ ಎಂದರು. ಬಳಿಕ ಅತ್ತೆ ತುಂಬ ಕಿರುಕುಳ ನೀಡುತಿದ್ದಾರೆ. ಅವರನ್ನು ಸಾಯಿಸಲು ಎರಡು ಮಾತ್ರೆ ಕೊಡಿ ಎಂದರು. ಅದಾದ ಬಳಿಕ ನಾನು ಪ್ರಶ್ನೆ ಮಾಡಿದೆ. ಬಳಿಕ ಎಲ್ಲ ಸಂದೇಶಗಳನ್ನು ಡಿಲೀಟ್ ಮಾಡಿದರು. ಡಿಲೀಟ್ ಆಗುವ ಮೊದಲೇ ನಾನು ಸ್ಕ್ರೀನ್​ಶಾಟ್ ತೆಗೆದುಕೊಂಡಿದ್ದೆ. ಬಳಿಕ ನಾನು ಸಂಜಯನಗರ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದೇನೆ” ಎಂದು ಹೇಳಿದರು.

https://www.vijayavani.net/uttarakhand-man-posing-as-amit-shahs-son-demands-rs-5-lakh-from-mla-arrested

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net