

ತೋಳ್ಬಲ ಪ್ರದರ್ಶಿಸುವಲ್ಲಿ ಯಶಸ್ವಿಯಾದ ಬೆಂಗಳೂರಿನ ಶಶಿಧರ್ ‘ದಸರಾ ಶ್ರೀ’ ಹಾಗೂ ಕೆ.ಎನ್.ಮಧುರಾ ‘ಶ್ರೀ ದಸರಾ ಕುಮಾರಿ’ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾದರು.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ಈ ಸಾಧನೆ ಮಾಡಿದರು.
ಬೆಂಗಳೂರಿನ ಮಂಜುನಾಥ್ ಪವಾರ್ ‘ಮೈಸೂರು ದಸರಾ ವಿಶೆೇಷ ಚೇತನ’ ಪ್ರಶಸ್ತಿ ಪಡೆದರೆ, ಬೆಂಗಳೂರಿನ ಎಸ್.ರೇಣುಕಾ ‘ಮೈಸೂರು ದಸರಾ ನವ ಚೇತನ ತಾರೆ’ ಪ್ರಶಸ್ತಿ ತನ್ನದಾಗಿಸಿಕೊಂಡರು.