ಆನ್ಲೈನ್ ಮೂಲಕ ದಸರಾ ಪಾಸ್ ಮಾರಾಟ

mysore
Published on


ಮೈಸೂರು: ಈ ಬಾರಿಯ ದಸರಾ ಉತ್ಸವದ ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಗೆ ಟಿಕೆಟ್‌ಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಎಂದರು.
ಗೋಲ್ಡ್ ಕಾರ್ಡ್‌ಗೆ 6500 ರೂ. ನಿಗದಿ ಮಾಡಿದ್ದು, ಒಂದು ಕಾರ್ಡ್‌ನಲ್ಲಿ ಒಬ್ಬರು ಅರಮನೆ ಅಂಗಳದಲ್ಲಿ ಜಂಬೂಸವಾರಿ, ಪಂಜಿನ ಕವಾಯತು, ಚಾಮುಂಡಿಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಹಾಗೆಯೇ ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಯ ಟಿಕೆಟ್‌ಗೆ 3500 ರೂ. ನಿಗದಿ ಪಡಿಸಲಾಗಿದೆ. ಬನ್ನಿಮಂಟಪದಲ್ಲಿನ ಪಂಜಿನ ಕವಾಯತು ಮೈದಾನದಲ್ಲಿ ಪಂಜಿನ ಕವಾಯತು ವೀಕ್ಷಣೆಯ ಟಿಕೆಟ್‌ಗೆ ಒಂದು ಸಾವಿರ ರೂ. ನಿಗದಿ ಮಾಡಲಾಗಿದೆ. ಈ ಎಲ್ಲ ಟಿಕೆಟ್‌ಗಳನ್ನು ಆನ್ಲೈನ್ ಮುಖಾಂತರ ಮಾರಾಟ ಮಾಡಲಾಗುತ್ತದೆ. ಎಲ್ಲರಿಗೂ ಈ ಟಿಕೆಟ್‌ಗಳು ಸಿಗಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೆ.26 ರಿಂದ 30 ರವರೆಗೆ 5 ದಿನಗಳ ಕಾಲ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಪ್ರತಿನಿತ್ಯ 1000 ದಿಂದ 1500 ಗೋಲ್ಡ್ ಕಾರ್ಡ್‌ಗಳನ್ನಷ್ಟೇ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net