ಪತ್ರಕರ್ತರ ದಸರಾ ಆಚರಣೆ ವಿಶಿಷ್ಟ

dasara
ಶಿವಮೊಗ್ಗದಲ್ಲಿ ಪತ್ರಕರ್ತರ ದಸರಾವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು. ಎಚ್.ಎಂ.ಚಂದ್ರಶೇಖರಪ್ಪ, ಎಸ್.ಚಂದ್ರಕಾಂತ್, ವೈದ್ಯನಾಥ್, ಅರುಣ್‌ಕುಮಾರ್, ರವಿಕುಮಾರ್, ಹಾಲಸ್ವಾಮಿ ಇತರರಿದ್ದರು.
Published on

ಶಿವಮೊಗ್ಗ : ಮೊದಲ ಬಾರಿ ವಿಶಿಷ್ಟವಾದ ಪತ್ರಕರ್ತರ ದಸರಾ ಆಚರಣೆ ಮಾಡಲಾಗುತ್ತಿದೆ. ಮುಂದಿನ ವರ್ಷ ಇದನ್ನು ಇನ್ನಷ್ಟು ವ್ಯವಸ್ಥಿತ ಹಾಗೂ ವಿಶೇಷ ರೀತಿಯಿಂದ ಈ ಕಾರ್ಯಕ್ರಮ ಆಚರಿಸಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಪತ್ರಕರ್ತರ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾ ಕ್ಷೇತ್ರ ಇಡೀ ಜಗತ್ತಿಗೆ ಬೇಕಿರುವಂಥದ್ದು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸ್ವಾತಂತ್ರೃ ಹರಣವಾಗಿತ್ತು. ಅದರ ವಿರುದ್ಧ ಅನೇಕರು ಹೋರಾಟ ಮಾಡಿದ್ದರು. ಇಂದು ಆ ಪರಿಸ್ಥಿತಿ ಇಲ್ಲ. ಒಂದು ಕಾಲದಲ್ಲಿ ಆಕಾಶವಾಣಿ ಮಾತ್ರ ಸುದ್ದಿ ನೀಡುವ ಕೇಂದ್ರವಾಗಿತ್ತು. ಈಗ ಮಾಧ್ಯಮ ಕ್ಷೇತ್ರ ವಿಸ್ತಾರವಾಗಿ ಹರಡಿಕೊಂಡಿದೆ ಎಂದರು.
ಇಂದು ಕ್ಷಣಮಾತ್ರದಲ್ಲಿ ಜಗತ್ತಿನ ಸುದ್ದಿಗಳು ನಮ್ಮೆಡೆಗೆ ಹರಿದುಬರುತ್ತವೆ. ನಾನೂ ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೆ. ನಾನು ಪತ್ರಿಕೆ ಹಂಚಿದ್ದೆ. ಏಜೆನ್ಸಿಯನ್ನೂ ಮಾಡಿದ್ದೆ. ಹೀಗಾಗಿ ಈ ಕ್ಷೇತ್ರದ ಬಗ್ಗೆ ಒಂದಷ್ಟು ವಿಭಿನ್ನ ಅನುಭವಗಳಿವೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಪ್ರಬಂಧ, ಚರ್ಚೆ ಹಾಗೂ ರೀಲ್ಸ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪತ್ರಕರ್ತರ ದಸರಾ ಅಂಗವಾಗಿ ವ್ಯಂಗ್ಯಚಿತ್ರ ಹಾಗೂ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಪತ್ರಕರ್ತರಾದ ಎಸ್.ಚಂದ್ರಕಾಂತ್, ವೈದ್ಯನಾಥ್, ಅರುಣ್‌ಕುಮಾರ್, ರವಿಕುಮಾರ್, ಹಾಲಸ್ವಾಮಿ, ಸೋಮನಾಥ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net