27ರಂದು ದಸಂಸ ಗುರುಮೂರ್ತಿ ಜನ್ಮದಿನಾಚರಣೆ

dss gurumurthy abhimani balaga
ಗುರುಮೂರ್ತಿ ಅಭಿನಂದನಾ ಸಮಿತಿ ಮುಖಂಡ ಶಿವಬಸಪ್ಪ ಸುದ್ದಿಗೋಷ್ಠಿ ನಡೆಸಿದರು.
Published on

ಶಿವಮೊಗ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ.ಗುರುಮೂರ್ತಿ ಅವರ 60ನೇ ವರ್ಷದ ಜನ್ಮದಿನಾಚರಣೆ ಮತ್ತು ಸಮುದ್ರ ಸಂಗಮ ಎಂಬ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮ ಆ.27ರಂದು ಬೆಳಗ್ಗೆ 10.30ಕ್ಕೆ ಆರ್ಯ ಈಡಿಗರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿ ಮುಖಂಡ ಶಿವಬಸಪ್ಪ ತಿಳಿಸಿದರು.

ಹಂಪಿ ಕನ್ನಡ ವಿವಿಯ ಪ್ರೊ. ಸಣ್ಣರಾಮ ಅಭಿನಂದನಾ ನುಡಿ ಆಡುವರು. ಮಾಜಿ ಸಚಿವ ಕಿಮ್ಮನೆ ರತ್ನಾಕರ ಅಭಿನಂದನಾ ಗ್ರಂಥ ಸಮರ್ಪಿಸುವರು. ಅಭಿನಂದನಾ ಗ್ರಂಥದ ಕುರಿತು ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಎ.ಕೆ.ತಿಮ್ಮಪ್ಪ ಮಾತನಾಡುವರು. ಅತಿಥಿಗಳಾಗಿ ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಉಪಸ್ಥಿತರಿರುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಯಚೂರಿನ ಹನುಮಂತಪ್ಪ ಕಾಕಲ್, ಚಿಕ್ಕಬಳ್ಳಾಪುರದ ಬಿ.ಎನ್.ಗಂಗಾಧರ, ಜಿಲ್ಲಾ ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಪ್ರೊ. ಬಿ.ಎಲ್.ರಾಜು, ಸಹ್ಯಾದ್ರಿ ಕಾಲೇಜಿನ ಪ್ರೊ. ಮೇಟಿ ಮಲ್ಲಿಕಾರ್ಜುನ ಹಾಜರಿರುವರು. ಅಭಿನಂದನಾ ಸಮಿತಿ ಅಧ್ಯಕ್ಷ ಬಿ.ಎ.ಕಾಟ್ಕೆ ಅಧ್ಯಕ್ಷತೆ ವಹಿಸುವರು ಎಂದರು. ಸಮಿತಿಯ ಹನುಮಂತಪ್ಪ ಯಡವಾಲ, ಹರಿಗೆ ರವಿ, ಎಂ ಏಳುಕೋಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net