ದರ್ಶನ್ ಜಾಮೀನು ಅರ್ಜಿ ಮತ್ತೆ ಮಂದೂಡಿಕೆ

darshan bail case postponed
Published on

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆಯು ಶನಿವಾರಕ್ಕೆ (ಅ.೫) ಮುಂದೂಡಿಕೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ಬೆನ್ನಲ್ಲೇ ದರ್ಶನ್, ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ ೫೭ನೇ ಸಿಸಿಎಚ್ ಕೋರ್ಟ್‌ನ ನ್ಯಾಯಾಧೀಶ ಜೈಶಂಕರ್, ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿದರು.
ದರ್ಶನ್ ಪರ ಸುದೀರ್ಘ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ‘‘ಎಸ್‌ಪಿಪಿ ಅವರು ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಅತ್ಯುತ್ತಮ ಎಂದಿದ್ದಾರೆ. ಆದರೆ, ಇದೊಂದು ಕಳಪೆ ತನಿಖೆಯಾಗಿದ್ದು, ಪೊಲೀಸರ ತನಿಖೆಯಲ್ಲಿ ಸಾಕಷ್ಟು ಲೋಪಗಳಿದ್ದು, ತನಿಖಾಧಿಕಾರಿಗಳೇ ಹಲವು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ. ಆರೋಪ ಪಟ್ಟಿಯಲ್ಲಿ ದಾಖಲಿಸಿರುವ ಮಾಹಿತಿಗೂ, ಸಾಕ್ಷಿಗಳು ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ರಸ್ತೆ ಬದಿ ಜಾದೂ ಮಾಡುವವರು ಖಾಲಿ ಡಬ್ಬ ತೋರಿಸಿ ಮೊಲ ಇದೆ ಎನ್ನುತ್ತಾರಲ್ಲ, ಪೊಲೀಸರ ತನಿಖೆ ಸಹ ಹಾಗೆಯೇ ಇದೆ ಎಂದರು.
ದರ್ಶನ್ ವಿರುದ್ಧ ಎ್ಐಆರ್ ದಾಖಲಾದಾಗಿನಿಂದಲೂ ಮಾಧ್ಯಮಗಳು ಟ್ರಯಲ್ ನಡೆಸಿ ದೋಷಿ ಎಂದು ತೀರ್ಪು ನೀಡಿವೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್‌ರನ್ನು ಅಪರಾಧಿ ಎಂಬಂತೆ ಬಿಂಬಿಸಲಾಗಿದೆ. ಪ್ರಕರಣದ ಸಾಕ್ಷಿ ಹೇಳಿಕೆಗಳು, ಪಂಚನಾಮೆ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ರೇಣುಕಸ್ವಾಮಿ ಮೈ ಮೇಲಿದ್ದ ಗಾಯಗಳಲ್ಲಿ ಕೆಲವು ನಾಯಿ ಕಚ್ಚಿದ್ದರಿಂದ ಆಗಿದ್ದವು, ಅವನ್ನೂ ಸಹ ದರ್ಶನ್ ಹಾಗೂ ಸಹಚರರ ಹಲ್ಲೆಯಿಂದ ಆಗಿವೆ ಎಂದು ತೋರಿಸಲಾಗಿದೆ. ಮಾಧ್ಯಮಗಳ ಟ್ರಯಲ್ನಿಂದ ಜಾಮೀನು ನಿರ್ಧಾರವಾಗಲ್ಲ ಎಂದು ನಂಬಿದ್ದೇನೆ ಎಂದು ವಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net