ದುಬೈಗೆ ಹಾರಿದ ನಟ ದರ್ಶನ್​! ಕಾರಣ? ಈ ವಿಡಿಯೋ ನೋಡಿ

ವಿಜಯವಾಣಿ - 2024-01-07T203945.749
Published on

ಬೆಂಗಳೂರು: ತರುಣ್​ ಸುದೀರ್​ ನಿರ್ದೇಶನದ, ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಮತ್ತು ಹಿರಿಯ ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ‘ಕಾಟೇರ’ ಕಳೆದ ವರ್ಷ ಡಿ.29 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಇದೀಗ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುವಲ್ಲಿ ಯಶಸ್ವಿಯಾಗಿದೆ. ಇಂದಿಗೂ ಸಿನಿಪ್ರೇಕ್ಷಕರಿಂದ ತುಂಬುತ್ತಿರುವ ಚಿತ್ರಮಂದಿರಗಳಲ್ಲಿ ಸಿನಿಮಾಗೆ ವ್ಯಾಪಕ ಪಾಸಿಟಿವ್ ಪ್ರತಿಕ್ರಿಯೆಗಳು ಲಭಿಸುತ್ತಿದ್ದು, ಈ ಯಶಸ್ಸಿನ ಬೆನ್ನಲ್ಲೇ ದರ್ಶನ್​ ದುಬೈಗೆ ಹಾರಿದ್ದಾರೆ.

ಒಂದೇ ವಾರದಲ್ಲಿ 104.58 ಕೋಟಿ ರೂ. ಕಲೆಕ್ಷನ್​​​ ಮಾಡಿರುವ ಕಾಟೇರ ಇದೀಗ ವೇಗವಾಗಿ 150 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದೆ. ಚಿತ್ರವು ಕರ್ನಾಟಕದಲ್ಲಿ ಭರ್ಜರಿ ಯಶಸ್ಸು ಪಡೆಯುತ್ತಿರುವ ಹಿನ್ನೆಲೆ ದರ್ಶನ್​, ಹೊರದೇಶದಲ್ಲಿ ಕಾಟೇರ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ತಿಳಿಯಲು ಇದೀಗ ದುಬೈಗೆ ತೆರಳಿದ್ದಾರೆ.

ಇತರೆ ದೇಶಗಳಾದ ಅಮೇರಿಕಾ, ಬ್ರಿಟನ್​, ಕೆನಡಾ, ಯೂರೋಪ್​​​ ಸೇರಿದಂತೆ ಹಲವೆಡೆ ಕಾಟೇರ ರಿಲೀಸ್​​ ಆಗುವ ಮುಖೇನ ರಾರಾಜಿಸಲು ಸಜ್ಜಾಗಿದೆ. ನಾಳೆ ದುಬೈನಲ್ಲಿ ಚಿತ್ರದ ವಿಶೇಷ ಪ್ರದರ್ಶನ ಆಯೋಜನೆಯಾಗಿದ್ದು, ಈ ಕಾರಣಕ್ಕೆ ದರ್ಶನ್ ದುಬೈಗೆ ತೆರಳಿದ್ದಾರೆ. ​ಈ ಮೂಲಕ ದರ್ಶನ್​ ಸಿನಿಮಾ ಪರಭಾಷೆಗಳಲ್ಲೂ ಬಿಡುಗಡೆಗೊಳ್ಳುವ​ ಸಾಧ್ಯತೆ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net