VIDEO | ಕೈ ನೋವಿನಲ್ಲೂ ಹಸುಗಳಿಗೆ ಮೇವು ಸಿದ್ಧಪಡಿಸಿದ ನಟ ದರ್ಶನ್​

Darshan Thoogudeepa
Published on

ಬೆಂಗಳೂರು: ಸ್ಯಾಂಡಲ್​ವುಡ್​​ ನಟ ದರ್ಶನ್​ ಪ್ರಾಣಿಗಳ ಕುರಿತಾಗಿ ವಿಶೇಷ ಕಾಳಜಿ ಮತ್ತು ಅಕ್ಕರೆ, ಇದೇ ಕಾರಣಕ್ಕೆ ಕುದುರೆ, ಹಸು, ಎತ್ತು ಸೇರಿದಂತೆ ಹಲವು ಪ್ರಾಣಿಗಳನ್ನು ಸಾಕಿದ್ದಾರೆ. ಅರಣ್ಯಕ್ಕೆ ತೆರಳಿ ವನ್ಯಜೀವಿಗಳ ಛಾಯಾಗ್ರಹಣದಲ್ಲಿ ತೊಡಗುತ್ತಾರೆ. ಅವರು ತೆಗೆದ ವನ್ಯಜೀವಿಗಳ ಚಿತ್ರಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಅರಣ್ಯ ಇಲಾಖೆಗೆ ನೀಡುತ್ತಾರೆ. ಆ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಕಾಣ್ಕೆ ನೀಡುತ್ತಾರೆ.

ನಟ ದರ್ಶನ್ ಪ್ರಾಣಿ ಪಕ್ಷಿಗಳನ್ನು ಶೋಕಿಗಾಗಿ ಸಾಕುವವರಲ್ಲ. ಪ್ರಾಣಿ, ಪಕ್ಷಿಗಳ ಪಾಲನೆಯಲ್ಲಿ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ನಟ ದರ್ಶನ್​ ಬಲ ಕೈಗೆ ಸರ್ಜರಿ ಆಗಿದೆ. ಇನ್ನು ಒಂದು ತಿಂಗಳು ಶೂಟಿಂಗ್​ ಹೋಗದೇ ಕಂಪ್ಲೀಟ್ ಆಗಿ ರೆಸ್ಟ್​ ಮಾಡಿ ಅಂತ ಡಾಕ್ಟರ್ ಹೇಳಿದ್ದಾರೆ. ಹೀಗಾಗಿ ದರ್ಶನ್ ನಟನೆಯ ಡೆವಿಲ್ ಸಿನಿಮಾ ಶೂಟಿಂಗ್ ಮುಂದಕ್ಕೆ ಹೋಗಿದೆ. ಮುಂದಿನ ತಿಂಗಳು 15ರ ನಂತರ ಡೆವಿಲ್ ಚಿತ್ರೀಕರಣಕ್ಕೆ ದರ್ಶನ್ ಹೋಗಲಿದ್ದಾರೆ.

ಸಿನಿಮಾ ಶೂಟಿಂಗ್​ ರೆಜೆಯಲ್ಲಿರೋ ದರ್ಶನ್ ಕಾರ್ಯಕ್ರಮಗಳಿಗೆ ಬೇಟಿ ಕೊಡುತ್ತಿದ್ರು. ಈಗ ತನ್ನ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ತನ್ನ ಫಾರ್ಮ್ ಹೌಸ್​ನಲ್ಲಿ ಕಾಲ ಕಳೆಯುತ್ತಿರೋ ನಟ ದರ್ಶನ್ ತನ್ನ ಹುಸುಗಳಿಗೆ ಮೇವು ಸಿದ್ಧಪಡಿಸಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗುತ್ತಿದೆ.

ಫಾರ್ಮ್ ಹೌಸ್​ನಲ್ಲಿ ತನ್ನ ಹುಸುಗಳಿಗೆ ಮೇವು ಸಿದ್ಧಪಡಿಸಿದ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net