ಮಾಧ್ಯಮಗಳಿಗೆ ಹೈಕೋರ್ಟ್​ ನಿರ್ಬಂಧದ ಬೆನ್ನಲ್ಲೇ ಪತ್ನಿಗೆ ಕರೆ ಮಾಡಿ ಈ ಬೇಡಿಕೆಯಿಟ್ಟ ದರ್ಶನ್​

darshan
Published on

ಬೆಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಹಾಗೂ ಸಹಚರರು ಜೈಲು ಸೇರಿದ್ದು, ಪೊಲೀಸರು ತನಿಖೆ ಪೂರ್ತಿಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್​​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಸದ್ಯದ ಬೆಳವಣಿಗೆ ಗಮನಿಸಿದರೆ ದರ್ಶನ್​ ಮತ್ತು ಸಹಚರರಿಗೆ ಬೇಲ್​ ಸಿಗೋದು ಡೌಟ್​ ಎಂದು ಹೇಳಲಾಗಿದ್ದು, ದಾಸನಿಗೆ ಮುಂದಿನ ಕೆಲ ವರ್ಷಗಳ ಕಾಲ ಜೈಲೂಟ ಫಿಕ್ಸ್​ ಎಂದು ಹೇಳಲಾಗಿದೆ.

ಇತ್ತ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಪ್ರಸಾರ ಮಾಡದಂತೆ ಮತ್ತು ಮುದ್ರಿಸದಂತೆ ಕರ್ನಾಟಕ ಹೈಕೋರ್ಟ್​ ಆದೇಶ ನೀಡಿದ ಬೆನ್ನಲ್ಲೇ ದರ್ಶನ್​ ಪತ್ನಿ ವಿಜಯಲಕ್ಷ್ಮಿಗೆ ಕರೆ ಮಾಡಿ ಮಾತನಾಡಿದ್ದು, ಸೆಕ್ಯುರಿಟಿ ಸೆಲ್‌ನಲ್ಲೇ ಪತ್ನಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ದರ್ಶನ್ ಸೇರಿದಂತೆ ನಾಲ್ವರು ಖೈದಿಗಳಿಗೆ ಈ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆ ದೃಷ್ಟಿಯಿಂದ ಹೈ ಸೆಕ್ಯುರಿಟಿ ಕಾಲ್ ವ್ಯವಸ್ಥೆ ಮಾಡಲಾಗಿದೆ.

ಪ್ರಿಸನ್ ಕಾಲ್ ಸಿಸ್ಟಮ್​ನಲ್ಲಿ ದರ್ಶನ್​ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಂಬರ್​ಅನ್ನು ಸೇವ್​ ಮಾಡಲಾಗಿದ್ದು, ಐದು ನಿಮಿಷಗಳ ಕಾಲ ಪತ್ನಿಯೊಂದಿಗೆ ದರ್ಶನ್​ ಮಾತುಕತೆ ನಡೆಸಿದ್ದಾರೆ. ಇಂದಿನ ಬೆಳವಣಿಗೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಿಕ್ಕ ಸಮಯದಲ್ಲಿ ದರ್ಶನ್​ ಮಾತನಾಡಿದ್ದು, ಪತ್ನಿ ಜೊತೆ ಮಾತನಾಡುವಾಗ ಭಾವುಕರಾಗಿದ್ದಾರೆ.

Vijayalakshmi Darshan

ಮಾತನಾಡುವ ವೇಳೆ ನಾಳೆಯೇ ಜೈಲಿಗೆ ಬರುವಂತೆ ಪತ್ನಿಗೆ ತಿಳಿಸಿದ ದರ್ಶನ್ ಜೊತೆಗೆ ತಾಯಿ ಮೀನಾರನ್ನು ಕರೆದುಕೊಂಡು ಬರುವಂತೆ ಹೇಳಿರುವ ದರ್ಶನ್​. ಈ ಬಗ್ಗೆ ಕುಟುಂಬಸ್ಥರು ಮಾಹಿತಿ ಅಧಿಕಾರಿಗಳಿಗೆ ನೀಡಿದ್ದು ನಾಳೆ (ಸೆಪ್ಟೆಂಬರ್​ 10) ಸಂಜೆ 4 ಗಂಟೆ ಸುಮಾರಿಗೆ ಜೈಲಿಗೆ ಭೇಟಿ ನೀಡುವುದಾಗಿ ಹೇಳಿರುವ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ದರ್ಶನ್​ ಹಾಗೂ ವಿಜಯಲಕ್ಷ್ಮಿ ನಡುವಿನ ಸಂಭಾಷಣೆಯನ್ನು ನಿಯಮದ ಪ್ರಕಾರ ಜೈಲಧಿಕಾರಿಗಳು ರೆಕಾರ್ಡ್​ ಮಾಡಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ನಟ ದರ್ಶನ್​ರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಸ್ಥಳಾಂತರಿಸಲಾಗಿದ್ದು, ಉಳಿದ ಆರೋಪಿಗಳನ್ನು ತುಮಕೂರು, ಶಿವಮೊಗ್ಗ, ಮೈಸೂರು, ವಿಜಯಪುರ, ಧಾರವಾಡ ಹಾಗೂ ಬೆಳಗಾವಿಗೆ ಸ್ಥಳಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net