ದರ್ಶನ್ ಕೊಲೆ ಮಾಡುವಷ್ಟು ಕಟುಕನಲ್ಲ, ಸ್ವಲ್ಪ ಮುಂಗೋಪ, ಸಿಟ್ಟು ಜಾಸ್ತಿ; ಉದಯ್ ಗೌಡ ಸಮರ್ಥನೆ

kadaluru 1
Published on

ಬೆಂಗಳೂರು: ನಟ ದರ್ಶಶ್‌ಗೆ ಸ್ವಲ್ಪ ಮುಂಗೋಪ, ಸಿಟ್ಟು ಜಾಸ್ತಿ. ಆದರೆ ಕೊಲೆ ಮಾಡುವಷ್ಟು ಕಟುಕನಲ್ಲ ಎಂದು ಮದ್ದೂರು ಶಾಸಕ ಕದಲೂರು ಉದಯ್ ಗೌಡ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಹಲವು ವರ್ಷಗಳಿಂದ ದರ್ಶನ್ ಸ್ನೇಹಿತ. ಆದರೆ ಈ ರೀತಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಜತೆಗಿರುವವರು ಮಾಡಿ ಇವರ ಮೇಲೆ ಏನಾದರೂ ಹಾಕಿದರಾ ಗೊತ್ತಿಲ್ಲ. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು. ನಾನು ಈಗಲೇ ಏನನ್ನೂ ಹೇಳಲು ಆಗುವುದಿಲ್ಲ ಎಂದರು.

ಆತ ಸ್ವಲ್ಪ ಮುಂಗೋಪದಿಂದ ಮಾತನಾಡುತ್ತಾನೆ ಅಷ್ಟೇ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ತನಿಖೆ ನಡೆದು ಸತ್ಯ ಹೊರಗೆ ಬರಲಿ. ಇನ್ನೇನು ಕೆಲವೇ ದಿನಗಳಲ್ಲಿ ಸತ್ಯ ಹೊರಬರುತ್ತದೆ. ರಾಜ್ಯದ ಜನರಿಗ್ೂ ಗೊತ್ತಾಗುತ್ತದೆ ಎಂದರು.

ಗನ್ ಮ್ಯಾನ್ ಮೇಲೆ ಹಲ್ಲೆ ಸುಳ್ಳು

ತಮ್ಮ ಗನ್ ಮ್ಯಾನ್ ಮೇಲೆ ದರ್ಶನ್ ಬೆಂಬಲಿಗರ ಹಲ್ಲೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನನ್ನ ಗನ್ ಮ್ಯಾನ್ ಮೇಲೆ ಹಲ್ಲೆ ನಡೆದಿರುವುದು ಗೊತ್ತಿಲ್ಲ. ಅದೆಲ್ಲವೂ ಸುಳ್ಳು. ಆ ರೀತಿಯ ಘಟನೆ ಆಗೇ ಇಲ್ಲ. ನನಗೆ ಐದಾರು ಮಂದಿ ಗನ್ ಮ್ಯಾನ್ ಇದ್ದರು. ಹಲ್ಲೆ ಮಾಡಿದ್ದರೆ ನನಗೆ ಗೊತ್ತಾಗುತ್ತಿರಲಿಲ್ವೇ? ಅಂತಾದ್ದೂ ಯಾವುದೂ ಆಗಿಲ್ಲ. ಅದೆಲ್ಲವೂ ಸುಳ್ಳು ಸೃಷ್ಟಿಯಷ್ಟೇ ಎಂದು ಉದಯ್ ಗೌಡ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net