ಬೆಂಗಳೂರಿನಲ್ಲಿ ದರ್ಶನ್ ಅಭಿಮಾನಿ ಅರೆಸ್ಟ್​; ಬೆದರಿಕೆ, ಪ್ರಚೋದನೆ ಆರೋಪ ಎಫ್ಐಆರ್ ದಾಖಲು

Darshan fan arrested in Bengaluru
Published on

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳಿಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ. ಜುಲೈ 4ರವರೆಗೆ ನಟ ದರ್ಶನ್​ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯಬೇಕಿದೆ.  ಈ ವಿಚಾರವಾಗಿ ದಚ್ಚು ಅಭಿಮಾನಿಗಳು ಕೊಂಚ ಆತಂಕಕ್ಕೆ ಇಡಾಗಿದ್ದಾರೆ. ಈ  ಸುದ್ದಿ ಬೆನ್ನಲ್ಲೇ ಈಗ ದರ್ಶನ್ ಅಭಿಮಾನಿಯೊಬ್ಬನನ್ನು ಪೊಲೀಸರು ಅರೆಸ್ಟ್​​ ಮಾಡಿದ್ದಾರೆ ಎನ್ನಲಾಗಿದೆ.

ಚೇತನ್ ಬಂಧನಕ್ಕೊಳಗಾದ ದರ್ಶನ್​ ಅಭಿಮಾನಿ. ಬಸವೇಶ್ವರ ನಗರ ಪೊಲೀಸರು ದರ್ಶನ್ ಅಭಿಮಾನಿ ಚೇತನ್​ನನ್ನು ಬೆದರಿಕೆ ಮತ್ತು ಪ್ರಚೋದನೆ ಆರೋಪದ ಮೇಲೆ ಬಂಧಿಸಿದ್ದಾರೆ. ನಿರ್ಮಾಪಕ ಉಮಾಪತಿ ವಿರುದ್ದ ದರ್ಶನ್ ಅಭಿಮಾನಿಗಳಿಗೆ ಪ್ರಚೋದನೆ ಮಾಡಿದ್ದ ಆರೋಪದ ಹಿನ್ನೆಲೆ ಐಪಿಸಿ ಸೆಕ್ಷನ್ 504, 506 ಅಡಿ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ.

ಪ್ರಚೋದನೆ ಮಾಡಿದ್ದ. ಜತೆಗೆ ಉಮಾಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಚೇತನ್.

ಚೇತನ್ ಸೋಷಿಯಲ್ ಮೀಡಿಯಾ ಮೂಲಕವಾಗಿ ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ. ಜತೆಗೆ ದರ್ಶನ್ ಅಭಿಮಾ‌ನಿಗಳಿಗೆ

ಬೆದರಿಕೆ ಹಾಕಿದ್ದ ಯುವಕನ ಬಗ್ಗೆ  ನಿರ್ಮಾಪಕ ಉಮಾಪತಿ ಗೌಡ ದೂರು ನೀಡಿದ್ದರು.  ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಚೇತನ್​​ ಬಂಧನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net