

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಆ್ಯಂಡ್ ಗ್ಯಾಂಗ್‌ನ ನ್ಯಾಯಾಂಗ ಬಂಧನ ಅವಧಿ ಸೆ.೯ಕ್ಕೆ (ಸೋಮವಾರ) ಮುಕ್ತಾಯವಾಗಲಿದ್ದು, ಎಲ್ಲ ಆರೋಪಿಗಳನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.
ಸೋಮವಾರ ನಗರದ ೨೪ನೇ ಎಸಿಎಂಎ ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಜೈಲಿನಲ್ಲಿ ಇರುವ ಎಲ್ಲ ಆರೋಪಿಗಳನ್ನು ಪೊಲೀಸರು ಹಾಜರು ಪಡಿಸಲಿದ್ದಾರೆ.
ಸೋಮವಾರ ಎಲ್ಲ ೧೭ ಆರೋಪಿಗಳ ಕೈಗೆ ಚಾರ್ಜ್‌ಶೀಟ್ ಸೇರಲಿದ್ದು, ಚಾರ್ಜ್‌ಶೀಟ್ ಪ್ರತಿ ಸಿಗುತ್ತಿದ್ದಂತೆ ನಟ ದರ್ಶನ್ ಸೇರಿ ಇತರೆ ಆರೋಪಿಗಳಿಂದ ಜಾಮೀನಿಗೆ ಅರ್ಜಿ ಸಲ್ಲಿಸಲುವ ಸಾಧ್ಯತೆ ಇದೆ. ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದರಿಂದ ವಕೀಲರ ಜತೆ ಚರ್ಚೆ ಮಾಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಮವಾರವೇ ಜಾಮೀನು ಅರ್ಜಿ ಸಲ್ಲಿಕೆಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇತ್ತೇಚೆಗೆ ಬಳ್ಳಾರಿ ಜೈಲಿಗೆ ಹೋದ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್, ದರ್ಶನ್‌ನಿಂದ ಜಾಮೀನು ವಕಾಲತ್ತಿಗೆ ಸಹಿ ಪಡೆದಿದ್ದರು. ಆರೋಪಿಗಳ ಪರ ವಕೀಲರಿಗೆ ಸೋಮವಾರ ಚಾರ್ಜ್‌ಶೀಟ್ ಪ್ರತಿ ಸಿಗಲಿದೆ. ಬಳಿಕ ಅದನ್ನು ಪರಿಶೀಲನೆ ನಡೆಸಿ ಸೋಮವಾರ ಅಥವಾ ಮಂಗಳವಾರ ನಟ ದರ್ಶನ್ ಜಾಮೀನು ಕೋರಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಹಾಕುವ ಸಾಧ್ಯತೆ ಇದೆ.
ಕೊಲೆ ಆಗಿ ಮೂರು ತಿಂಗಳು:
ಚಿತ್ರದುರ್ಗದ ರೇಣುಕಸ್ವಾಮಿ ಕಿಡ್ನ್ಯಾಪ್ ಮತ್ತು ಕೊಲೆ ಆಗಿ ಭಾನುವಾರಕ್ಕೆ (ಜೂ.೮) ಬರೋಬ್ಬರಿ ಮೂರು ತಿಂಗಳಾಗಿದೆ. ಜತೆಗೆ ದರ್ಶನ್ ಆ್ಯಂಡ್ ಗ್ಯಾಂಗ್ ಜೈಲುಪಾಲಾಗಿಯೂ ಮೂರು ತಿಂಗಳು ಕಳೆದಿದೆ. ಜೂನ್ ೮ರ ಬೆಳಗ್ಗೆ ರೇಣುಕಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದ್ದರು. ಆ ದಿನ ಮಧ್ಯಾಹ್ನ ಪಟ್ಟಣಗೆರೆ ಶೆಡ್‌ನಲ್ಲಿ ರೇಣಕಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕರೆಂಟ್ ಶಾಕ್ ನೀಡಿ ಬರ್ಬರವಾಗಿ ಕೊಲೆ ಮಾಡಿದ್ದರು. ಜೂ.೮ರ ಸಂಜೆ ೬ ಗಂಟೆಗೆ ರೇಣುಕಸ್ವಾಮಿ ಮೃತಪಟ್ಟಿದ್ದ. ಶವವನ್ನು ಸಾಗಿಸಲು ಪ್ಲಾನ್ ಮಾಡಿದ್ದ ನಟನ ಆಪ್ತರಾದ ವಿನಯ್ ಮತ್ತು ಪ್ರದೂಷ್‌ಗೆ ೩೦ ಲಕ್ಷ ರೂ. ಹಣ ಸುಪಾರಿ ನೀಡಿದ್ದರು. ಕೊಲೆ ನಾವೇ ಮಾಡಿರುವುದಾಗಿ ಹೇಳಿ ಸರೆಂಡರ್ ಆಗಲು ನಾಲ್ಕು ಜನರನ್ನು ದರ್ಶನ್ ಆಪ್ತರು ನೇಮಿಸಿದ್ದರು. ನಿಖಿಲ್ ನಾಯ್ಕ ,ರಾಘವೇಂದ್ರ, ಕಾರ್ತಿಕ್, ಕೇಶವಮೂರ್ತಿ ಈ ನಾಲ್ವರು ಮೃತದೇಹ ಸಾಗಿಸಿ ಸುಮನಹಳ್ಳಿ ರಾಜಕಾಲುವೆ ಬಳಿ ಶವ ಎಸೆದಿದ್ದರು. ಜೂನ್ ೯ ರಂದು ಬೆಳಗ್ಗೆ ೮ ಗಂಟೆಗೆ ರೇಣುಕಸ್ವಾಮಿ ಶವ ಪತ್ತೆಯಾಗಿತ್ತು. ಅಪರಿಚಿತ ಶವವೆಂದು ಪ್ರಕರಣ ದಾಖಲಿಸಿ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ಕೈಗೊಂಡಿದ್ದರು. ಜೂ.೧೦ ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಹಾಜರಾಗಿ ನಾಲ್ವರು ಶರಣಾಗಿದ್ದರು. ವಿಚಾರಣೆ ವೇಳೆ ಆರೋಪಿಗಳು ಪೊಲೀಸರ ಮುಂದೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದರು. ಬಳಿಕ ಪೊಲೀಸರು ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಪವಿತ್ರಗೌಡ ಹಾಗೂ ದರ್ಶನ್ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದರು. ನಟ ದರ್ಶನ್‌ನನ್ನು ಜೂನ್ ೧೧ರಂದು ಮೈಸೂರಿನಲ್ಲಿ ಬಂಧಿಸಿದ ಎಸಿಪಿ ಚಂದನ್ ಮತ್ತು ತಂಡ ಬೆಂಗಳೂರಿಗೆ ಕರೆತಂದಿತ್ತು. ನಂತರ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿರುವ ೆಟೋ ವೈರಲ್ ಆದ ಮೇಲೆ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಸೆ.೪ ರಂದು ೨೪ ಎಸಿಎಂಎಂ ಕೋರ್ಟ್‌ಗೆ ತನಿಖಾಧಿಕಾರಿ ಎಸಿಪಿ ಚಂದನ್ ನೇತೃತ್ವದ ತಂಡ ಚಾರ್ಜ್‌ಶೀಟ್ ಸಲ್ಲಿಸಿತ್ತು.