

ಹಾವೇರಿ: 12 ನೇಶತಮಾನದ ಬಸವಾದಿ ಶಿವಶರಣರು ಮಹಿಳಾ ಸಮಾನತೆಯ ಹರಿಕಾರರಾಗಿದ್ದರು ಎಂದು ಧಾರವಾಡದ ಮುರುಘಾಮಠ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ದಾನಮ್ಮದೇವಿ ಜಾತ್ರಾ ನಿಮಿತ್ತ ಶನಿವಾರ ಏರ್ಪಡಿಸಿದ್ದ ಧರ್ಮಸಭೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಾಮಾಜಿಕ, ಧಾಮಿರ್ಕ ಸಾಂಸತಿಕ, ಸಾಹಿತ್ಯಿಕ ಸಮಾನತೆಯನ್ನು ಕೊಟ್ಟು ಮಹಿಳೆ ಸಮಾಜದ ಮುಖ್ಯ ವಾಹಿನಿಗೆ ಬರಲು ಕಾರಣರಾದವರು ಶರಣರು. ಗೃಹಸ್ಥ ಜೀವನ ಅತ್ಯತ್ತಮ ಜೀವನ ಶರಣರು ಸಂಸಾರ ಜೀವನದಲ್ಲಿಯೂ ಸಮರತೆಯನ್ನು ಕಂಡವರಾಗಿದ್ದರು. ಆ ಕಾಲಘಟ್ಟದಲ್ಲಿಯೇ ದಾನಮ್ಮ ಮಾಡಿದ ಧಾಮಿರ್ಕ ಸಾಮಾಜಿಕ ಕಾರ್ಯಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದರು.
ಸಮ್ಮುಖ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಸಹನೆ ಮಹಿಳೆಯ ದೌರ್ಬಲ್ಯವಲ್ಲ ಅದು ಅವರ ಶ್ರೇಷ್ಠಗುಣ. ಶರಣರ ಆಚಾರ ವಿಚಾರಗಳು ಎಂದೆಂದಿಗೂ ಪ್ರಸ್ತುತವಾಗಿದ್ದು ಮಹಿಳಾ ಶ್ರೇಷ್ಠರಲ್ಲಿ ದಾನಮ್ಮ ಅಗ್ರಶ್ರೇಣಿಯ ಶರಣೆಯಾಗಿದ್ದಾರೆ ಎಂದರು.
ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಗುರುಪಾದೇಶ್ವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹಲಸೂರು ಬಣ್ಣದ ಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೀಲಾವತಿ ಸಿದ್ದೇಶ್ವರ ಮಾಗಾವಿ ಅವರಿಂದ ಈ ವರ್ಷದಿಂದ ಕೊಡಲ್ಪಡುವ ವರ್ಷದ ವ್ಯಕ್ತಿ ಶ್ರೀ ದಾನೇಶ್ವರಿ ಪ್ರಶಸ್ತಿಯನ್ನು ಬ್ಯಾಡಗಿಯ ಸಾಹಿತಿ ಸಂಕಮ್ಮ ಸಂಕಣ್ಣನವರ ಅವರಿಗೆ ಪ್ರದಾನ ಮಾಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿರುಪಾಕ್ಷಪ್ಪ ಹಾವನೂರ, ಸುಲಕ್ಷಣ ಶಿವಪೂರ ಮತ್ತು ಸಹಕಾರಿ ರತ್ನ ಪುರಸತ ಶಿವಾನಂದ ರಾಮಗಿರಿ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಮಂಜುನಾಥ ಬಡಿಗೇರ, ಚನ್ನಪ್ಪ ಹಲಕೊಪ್ಪ ಅವರಿಂದ ವಚನ ಸಂಗೀತ ಹಾಗೂ ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮ ಜರುಗಿದವು.
ರಾಣೆಬೆನ್ನೂರ ಎಸ್ಜೆಎಂ ಕಾಲೇಜ್ನ ಪ್ರಾಚಾರ್ಯ ರೇವಣಸಿದ್ದಪ್ಪ ಹೆಗಡಾಲ, ದೇವಸ್ಥಾನ ಕಮಿಟಿ ಅಧ್ಯಕ್ಷೆ ಶೋಭಾತಾಯಿ ಮಾಗಾವಿ, ರಾಜಶೇಖರ ಮಾಗಾವಿ, ಮಹಂತೇಶ ಸುರಳಿಹಳ್ಳಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಬೆಳಗಾವೆಪ್ಪ ಬೆಳಗಾವಿ, ಶಿವಲಿಂಗಪ್ಪ ಕಲ್ಯಾಣಿ, ಸೊಮಶೇಖರ ಯಾದವಾಡ, ನಾಗಪ್ಪ ಹಾವೇರಿ, ವಿರುಪಾಕ್ಷಪ್ಪ ಹತ್ತಿಮತ್ತೂರ, ಸಂಜಯ ಮಾಗಾವಿ, ಅಜಿತ ಮಾಗಾವಿ, ಸುದಿಪ ಮಾಗಾವಿ, ಮುರಿಗೆಪ್ಪ ಕಡೇಕೊಪ್ಪ, ಶಿವಬಸಪ್ಪ ನಂದಿವಾಡ ಮತ್ತಿತರರು ಉಪಸ್ಥಿತರಿದ್ದರು.