ಎರಡು ಮನೆಗಳಿಗೆ ಹಾನಿ

rain tree
ಬಾಳೆಹೊನ್ನೂರಿನಿಂದ ಕಳಸ-ಕೊಟ್ಟಿಗೆಹಾರ ಸಂಪರ್ಕ ಕಲ್ಪಿಸುವ ತೆಪ್ಪದಗಂಡಿಯಲ್ಲಿ ಮುಖ್ಯರಸ್ತೆಗೆ ಮರಬಿದ್ದಿರುವುದು.
Published on

ಬಾಳೆಹೊನ್ನೂರು: ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪುಷ್ಯಾ ಮಳೆ ಅಬ್ಬರ ಭಾನುವಾರವೂ ಮುಂದುವರಿದಿದೆ.

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬಾಳೆಹೊನ್ನೂರಿನಿಂದ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಜಕ್ಕಣಕ್ಕಿ ಸಮೀಪದ ತೆಪ್ಪದಗಂಡಿಯಲ್ಲಿ ಬೃಹತ್ ಮರ ಬಿದ್ದು ಸಂಪರ್ಕ ಕಡಿತಗೊಂಡಿತ್ತು. ಸುಮಾರು ಎರಡು ತಾಸು ರಸ್ತೆ ಬಂದ್ ಆಗಿತ್ತು.
ಸಮೀಪದ ಹಲಸೂರು ಗ್ರಾಮದಲ್ಲಿ ರಸ್ತೆಗೆ ಮರವೊಂದು ಬಿದ್ದಿದ್ದು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮರ ತೆರವುಗೊಳಿಸಿದರು.
ಬಿ.ಕಣಬೂರು ಗ್ರಾಮದ ಅಕ್ಷರನಗರದಲ್ಲಿ ಸುಧಾಕರ್ ಎಂಬುವರ ಮನೆ ಗೋಡೆ ಕುಸಿದು ಪಕ್ಕದ ಮನೆಗೆ ಬಿದ್ದು ಹಾನಿಯಾಗಿದೆ. ಕರ್ಕೇಶ್ವರ ಗ್ರಾಮದ ರಾಮಯ್ಯ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಪಟ್ಟಣದ ಭದ್ರಾ ನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದ್ದು ನದಿಯ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಧಾರಾಕಾರ ಮಳೆಯೊಂದಿಗೆ ಗಾಳಿಯು ಬೀಸುತ್ತಿದ್ದು ಅಲ್ಲಲ್ಲಿ ಸಣ್ಣ ಮರಗಳು ಧರೆಗುರುಳಿವೆ. ಕೆಲವೆಡೆ ವಿದ್ಯುತ್‌ಲೈನ್ ಮೇಲೆ ಮರಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net